ಮಣಿಪುರದಲ್ಲಿ ಮೊದಲ, ಉ.ಪ್ರದೇಶದಲ್ಲಿ 6ನೇ ಹಂತದ ಮತದಾನ ಆರಂಭ

ಮಣಿಪುರದಲ್ಲಿ ಮೊದಲನೇ ಹಂತದ ಹಾಗೂ ಉತ್ತರ ಪ್ರದೇಶದಲ್ಲಿ 6ನೇ ಹಂತದ ವಿಧಾನಸಭಾ ಚುನಾವಣೆ ಬಿಗಿ ಭದ್ರತೆಯೊಂದಿಗೆ ಶನಿವಾರ ಆರಂಭಗೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಮಣಿಪುರದಲ್ಲಿ ಮೊದಲನೇ ಹಂತದ ಹಾಗೂ ಉತ್ತರ ಪ್ರದೇಶದಲ್ಲಿ 6ನೇ ಹಂತದ ವಿಧಾನಸಭಾ ಚುನಾವಣೆ ಬಿಗಿ ಭದ್ರತೆಯೊಂದಿಗೆ ಶನಿವಾರ ಆರಂಭಗೊಂಡಿದೆ. 
ಮಣಿಪುರದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಹ ಹಂತದ ಚುನಾವಣೆ ಇಂದಿನಿಂದ ಆರಂಭವಾಗಿದೆ. ಮೊದಲ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ವಿಷ್ಣುಪುರ, ಚುಡಾಚಂದಾಪುರ, ಕಾಂಗಪೊಕಪಿ ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತದಾನ ಹಿನ್ನಲೆಯಲ್ಲಿ ಒಟ್ಟು 1643 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. 
ಒಟ್ಟು 19,02,562 ಮತದಾರಿದ್ದು, ಇದರಲ್ಲಿ 9,28,562 ಪುರುಷರು ಹಾಗೂ 9,73,989 ಮಹಿಳಾ ಮತದಾರರಿದ್ದಾರೆ. 168 ಅಭ್ಯರ್ಥಿಗಳ ಭವಿಶ್ಯ ಇಂದು ನಿರ್ಧಾರವಾಗಲಿದೆ. ಮಣಿಪುರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದೆ. 
ಉತ್ತರಪ್ರದೇಶದಲ್ಲಿ 6ನೇ ಹಂತದ ಮತದಾನ ಆರಂಭವಾದಿಗ್ಗು, ಅಖಾಡದಲ್ಲಿರುವ 638 ಅಭ್ಯರ್ಥಿಗಳ ಹಣೆ ಬರೆಹವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ. 49 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆಗಳು ಆರಂಭಗೊಂಡಿದೆ. ಮತದಾನ ಹಿನ್ನಲೆಯಲ್ಲಿ ಒಟ್ಟು 17,926 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com