ಮಕ್ಕಳ ಬಿಸಿಯೂಟಕ್ಕೂ 'ಆಧಾರ್' ಕಡ್ಡಾಯ; ಕೇಂದ್ರದ ವಿರುದ್ಧ ಮಮತಾ ಕಿಡಿ

ಶಾಲಾ ಮಕ್ಕಳ ಬಿಸಿಯೂಟಕ್ಕೂ ಆಧಾರ್ ಕಾರ್ಡ್'ನ್ನು ಕಡ್ಡಾಯ ಮಾಡಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತಾ: ಶಾಲಾ ಮಕ್ಕಳ ಬಿಸಿಯೂಟಕ್ಕೂ ಆಧಾರ್ ಕಾರ್ಡ್'ನ್ನು ಕಡ್ಡಾಯ ಮಾಡಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 
ಬಿಸಿಯೂಟಕ್ಕೂ ಆಧಾರ್ ಕಡ್ಡಾಯ ಮಾಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿಯಾಗಿ ಟ್ವೀಟ್ ಮಾಡುವ ಮೂಲಕ ಕೇಂದ್ರ ವಿರುದ್ಧ ಕಿಡಿಕಾರಿರುವ ಅವರು, ಇನ್ನು ಮುಂದೆ ನವಜಾತ ಶಿಶುಜಾತ ಶಿಶುವಿಗೂ ಅಧಾರ್ ಕಾರ್ಡ್ ಬೇಕಾಗುತ್ತದೆ? ಮಕ್ಕಳ ಬಿಸಿಯೂಟಕ್ಕೂ ಆಧಾರ್ ಕಡ್ಡಾಯ ಮಾಡಿರುವುದು ನಿಜಕ್ಕೂ ಆಶ್ಚರ್ಯವನ್ನು ತಂದಿದೆ ಎಂದು ಹೇಳಿದ್ದಾರೆ. 
ಕಡು ಬಡತನದಲ್ಲಿರುವ ಬಡವರಿಗೆ, ನಮ್ಮ ನೆಚ್ಚಿನ ಮಕ್ಕಳಿಗೆ ಸಹಾಯ ಮಾಡುವ ಬದಲು, ಅವರನ್ನು ಇನ್ನು ಕೆಳಗೆ ಹಾಕಲಾಗುತ್ತಿದೆ. ಅವರ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಜನರು ಆಧಾರ್ ನಿಂದಾಗಿ ತಮ್ಮ ಖಾಸಗಿತನವೆಂಬುದನ್ನು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಇಷ್ಟೊಂದು ಋಣಾತ್ಮಕವೇಕೆ ಆಗುತ್ತಿದೆ? ದೇಶದಲ್ಲಿರುವ ನಾವು ಇದನ್ನು ಖಂಡಿಸಲೇಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com