ಪಿಥೋರಗಡ್: ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್-11 ಜಂಟಿ ಮಿಲಿಟರಿ ಸಮರಾಭ್ಯಾಸ ಉತ್ತರಾಖಂಡ್ ನ ಪಿಥೋರಗಡ್ ಪ್ರದೇಶದಲ್ಲಿ ಇಂದು ಆರಂಭವಾಗಲಿದೆ..ಇದು ಎರಡು ಸೇನೆಗಳ ಮಧ್ಯೆ ಬೆಟಾಲಿಯನ್ ಮಟ್ಟದ ಜಂಟಿ ಸಮರಾಭ್ಯಾಸವಾಗಿದೆ..ಎರಡು ವಾರಗಳ ಕಾಲ ನಡೆಯುವ ಈ ಸಮರಾಭ್ಯಾಸದಲ್ಲಿ ಎರಡೂ ಪಡೆಗಳ ಸೈನಿಕರಿಗೆ ದೀರ್ಘಕಾಲದ ಅವಧಿಯ ಬಂಡಾಯ ಕಾರ್ಯಾಚರಣೆಗಳನ್ನು ಹೇಳಿಕೊಡಲಾಗುತ್ತದೆ..ಮಾನವೀಯ ಸಹಾಯಗಳು, ವಿಪತ್ತು ಪರಿಹಾರ ಮತ್ತು ಪರಿಸರ ಸಂರಕ್ಷಣೆ ಕುರಿತು ಸಹ ಸೈನಿಕರಿಗೆ ತರಬೇತಿ ನೀಡಲಾಗುತ್ತದೆ..ಈ ಸಮರಾಭ್ಯಾಸ ತರಬೇತಿಯಿಂದ ಎರಡೂ ಪಡೆಗಳಿಗೆ ಅನುಕೂಲವಾಗಲಿದೆ. ಸೂರ್ಯ ಕಿರಣ ಸರಣಿ ತರಬೇತಿ ವರ್ಷಕ್ಕೆ ಎರಡು ಬಾರಿ ಭಾರತ ಅಥವಾ ನೇಪಾಳದಲ್ಲಿ ನಡೆಯುತ್ತದೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos