ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯ ಹೇಳಿಕೆ: ಪ್ರಶಾಂತ್ ಪರಿಚಾರಕ್ ಅಮಾನತು

ಫೆಬ್ರವರಿ 18ರಂದು ಸಾರ್ವಜನಿಕವಾಗಿ ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಬಿಜೆಪಿ ಬೆಂಬಲಿತ ಮಹಾರಾಷ್ಟ್ರ ವಿಧಾನ ಪರಿಷತ್ ನ ಪಕ್ಷೇತರ...
ಪ್ರಶಾಂತ್ ಪರಿಚಾರಕ್
ಪ್ರಶಾಂತ್ ಪರಿಚಾರಕ್
Updated on: 
ಬೆಂಗಳೂರು: ಫೆಬ್ರವರಿ 18ರಂದು ಸಾರ್ವಜನಿಕವಾಗಿ ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಬಿಜೆಪಿ ಬೆಂಬಲಿತ ಮಹಾರಾಷ್ಟ್ರ ವಿಧಾನ ಪರಿಷತ್ ನ ಪಕ್ಷೇತರ ಸದಸ್ಯ ಪ್ರಶಾಂತ್ ಪರಿಚಾರಕ್ ನನ್ನು ಅಮಾನತು ಮಾಡಲಾಗಿದೆ. 
ಪ್ರಶಾಂತ್ ಪರಿಚಾರಕ್ ಹೇಳಿಕೆ ಕುರಿತಂತೆ ತನಿಖೆಗೆ ಆದೇಶಿಸಿರುವ ಮೇಲ್ಮನೆ ಅಧ್ಯಕ್ಷೆ ರಾಮ್ ರಾಜೆ ನಿಂಬಾಳ್ಕರ್ ಅವರು ಪರಿಚಾರಕ್ ರನ್ನು ಒಂದೂವರೆ ವರ್ಷ ಕಾಲ ಶಾಸಕ ಸ್ಥಾನದಿಂದ ಅಮಾನತು ಮಾಡಿದ್ದಾರೆ.  
ಪ್ರಶಾಂತ್ ಪರಿಚಾರಕ್ ಪಂಡರಾಪುರದ ರ್ಯಾಲಿ ವೇಳೆ, ಯೋಧರು ಇಡೀ ವರ್ಷ ತಾವು ಮನೆಗೆ ವಾಪಸಾಗದೇ ಇದ್ದರೂ ತಮಗೆ ಮಕ್ಕಳಾದರೆ, ಯೋಧರು ಪಂಜಾಬ್ ಗಡಿಯಲ್ಲಿ ಸಿಹಿ ಹಂಚುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 
ಬಳಿಕ ತಮ್ಮ ತಪ್ಪಿನ ಅರಿವಾಗಿ ಪ್ರಶಾಂತ್ ಅವರು ಯೋಧರಿಗೆ ಅಗೌರವ ತೋರುವ ಉದ್ದೇಶ ನನಗೆ ಇರಲಿಲ್ಲ. ವೈಯಕ್ತಿಕಾವಗಿ ಯೋಧರು ಮತ್ತು ಅವರ ಕುಟುಂಬದ ಬಗ್ಗೆ ನನಗೆ ಗೌರವವಿದೆ. ನಾನು ಹಾಗೆ ಹೇಳಿದ್ದು ತಪ್ಪು. ಇದರಿಂದ ನಾನು ಯೋಧಱ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಪ್ರಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com