ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: ಎಚ್ಚರಿಕೆ ನೀಡಿದ ಅಧಿಕಾರಿಗಳು

ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವಡೆ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತವಾಗುವ ಕುರಿತು ಅಧಿಕಾರಿಗಳು ಸೋಮವಾರ ಎಚ್ಚರಿಕೆ ನೀಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವಡೆ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತವಾಗುವ ಕುರಿತು ಅಧಿಕಾರಿಗಳು ಸೋಮವಾರ ಎಚ್ಚರಿಕೆ ನೀಡಿದ್ದಾರೆ. 
ಶಿಮ್ಲಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಾದ ಕಂಗ್ರಾ ಮತ್ತು ಸಿರ್ಮೌರ್ ನ ಛುರ್ಧಾರ್, ಧೌಲಧಾರ್ ನಲ್ಲಿ ಭಾರೀ ಹಿಮಪಾತವಾಗುತ್ತಿದೆ. ಹೀಗಾಗಿ ಇನ್ನು ಮೂರು ದಿನಗಳಲ್ಲಿ ಹಿಮಪಾತವಾಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ  ವಿಪತ್ತು ನಿರ್ವಹಣೆಯ ವಿಶೇಷ ಕಾರ್ಯದರ್ಶಿ ಡಿಡಿ ಶರ್ಮಾ ಅವರು ಹೇಳಿದ್ದಾರೆ. 
ಭಾರೀ ಹಿಮಪಾತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಶಿಮ್ಲಾ, ಕುಲ್ಲು ಜಿಲ್ಲೆಗಳು ಮತ್ತು ಬುಡಕಟ್ಟು ಜನಾಂಗದವರ ಪ್ರದೇಶಗಳಲ್ಲಿರುವ 50 ರಸ್ತೆಗಳು ಬಂದ್ ಆಗಿವೆ. ಹಲವೆಡೆ ವಿದ್ಯುತ್ ಸೇವೆ ಹಾಗೂ ಮೊಬೈಲ್ ನೆಟ್ ವರ್ಕ್ ಸೇವೆಗಳೂ ಕೂಡ ಕಡಿತಗೊಂಡಿರುವುದಾಗಿ ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com