ಗಡಿ ವಿವಾದವನ್ನು ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಬಗೆಹರಿಸಬೇಕು. ಇದಕ್ಕಾಗಿ ಭಾರತ ಮತ್ತು ನೇಪಾಳ ಮಧ್ಯೆ ಜಂಟಿ ತಾಂತ್ರಿಕ ತಂಡವಿದೆ ಎಂದರು. ನಿಧಿಯವರು ಪ್ರಸ್ತುತ ದೆಹಲಿಯಲ್ಲಿದ್ದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಹತ್ಯೆ ಘಟನೆಯನ್ನು ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.