ಪಣಜಿ: ಐರಿಷ್ ಮಹಿಳೆ ಕೊಲೆ ಪ್ರಕರಣ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಗೋವಾದ ಕಾನಾಕೋವಾ ಬೀಚ್ ನಲ್ಲಿ 28 ವರ್ಷದ ಐರಿಷ್ ಮಹಿಳೆ ಶವ ಪತ್ತೆಯಾಗಿತ್ತು.
ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತ ಪಡಿಸಲಾಗಿದೆ, ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಜೊತೆಗೆ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.