ಅಪ್ರಾಪ್ತ ಬಾಲಕಿ ಹಾಗೂ ಯುವತಿ ತಮ್ಮ ಮೇಲೆ ಅತ್ಯಾಚಾರ ಎಸಗಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಇಬ್ಬರು ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ದೆಹಲಿ ಮೂಲದ ವಕೀಲ ಅನುಜ ಕಪೂರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಇದು ಗಂಭೀರ ಪ್ರಕರಣವಾಗಿದ್ದು ಮುಂಬೈ ಪೊಲೀಸರು ನಾಪತ್ತೆಯಾಗಿರುವ ಬಾಲಕಿಯನ್ನು ಪತ್ತೆ ಹಚ್ಚುವಂತೆ ನ್ಯಾಯಧೀಶರಾದ ರಂಜಿತ್ ಮೋರೆ ಮತ್ತು ರೇವತಿ ದೆರೆ ಪೊಲೀಸರಿಗೆ ಸೂಚಿಸಿದ್ದಾರೆ.