ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ: ಅಪ್ರಾಪ್ತ ಬಾಲಕಿ ಸಾವು

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರಿಗಾಗಿ ನಡೆದ ಬುಧವಾರ ನಡೆದ ಗುಂಡಿನ ಚಕಮಕಿ ವೇಳೆ ಅಪ್ರಾಪ್ತ ಬಾಲಕಿಯೊಬ್ಬಳು ಬಲಿಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರಿಗಾಗಿ ನಡೆದ ಬುಧವಾರ ನಡೆದ ಗುಂಡಿನ ಚಕಮಕಿ ವೇಳೆ ಅಪ್ರಾಪ್ತ ಬಾಲಕಿಯೊಬ್ಬಳು ಬಲಿಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ. 
ಕುಪ್ವಾರ ಜಿಲ್ಲೆಯ ಜುಗ್ತಿಯಾಲ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಉಗ್ರರು ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿ ಹಿನ್ನಲೆಯಲ್ಲಿ 41 ರಾಷ್ಟ್ರೀಯ ರೈಫಲ್ಸ್ ಮತ್ತು 98 ಸಿಆರ್'ಪಿಎಫ್ ಯೋಧರ ಪಡೆ ಕಾರ್ಯಾಚರಣೆಗಳಿದಿತ್ತು. 
ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಉಗ್ರರು ಹಾಗೂ ಸೇನಾ ಪಡೆಯ ಗುಂಡಿನ ಕಾಳಗಲ್ಲಿ ಪೊಲೀಸ್ ಪೇದೆ ಗಾಯಗೊಂಡಿದ್ದರು. ಗಾಯಗೊಂಡ ಪೇದೆಯನ್ನು ದಾನೀಶ್ ಅಹ್ಮದ್ ಎಂದು ಗುರ್ತಿಸಲಾಗಿತ್ತು. 
ಇದೇ ಕಾರ್ಯಾಚರಣೆ ವೇಳೆ ಎನ್ ಕೌಂಟರ್ ಸ್ಥಳದಲ್ಲಿದ್ದ ಕನೀಜಾ ಮತ್ತು ಫೈಸಲ್ ಎಂಬ ಮಕ್ಕಳು ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಪ್ರಾಪ್ತ ಬಾಲಕಿ ಕನೀಜಾ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com