ತ್ರಿಪುರ: ಭಾರತೀಯ ಸೇನೆ ಗುಂಡಿಗೆ 3 ಜನರ ಸಾವು, ಇಬ್ಬರಿಗೆ ಗಾಯ

ಜಾನುವಾರುಗಳ ಕಳ್ಳಸಾಗಣೆ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತ್ರಿಪುರದಲ್ಲಿ ಗಡಿ ಭದ್ರತಾ ಪಡೆ ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮೂವರು ಸಾವನ್ನಪ್ಪಿ 2 ಇಬ್ಬರು ಗಂಭೀರವಾಗಿ ಗಾಯಗೊಂಡಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಅಗರ್ತಲಾ: ಜಾನುವಾರುಗಳ ಕಳ್ಳಸಾಗಣೆ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ತ್ರಿಪುರದಲ್ಲಿ ಗಡಿ ಭದ್ರತಾ ಪಡೆ ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮೂವರು ಸಾವನ್ನಪ್ಪಿ 2 ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. 
ಮೃತರನ್ನು ಪರಕುಮಾರ್ (40), ಮನ್ ಕುಮಾರ್ (30) ಮತ್ತು ಸ್ವರಲಕ್ಷ್ಮಿ (40) ಎಂದು ಗುರ್ತಿಸಲಾಗಿದೆ. ಸುನಿಲ್ ಕುಮಾರ್ (47), ಜಿಬಾನ್ ಕುಮಾರ್ (22) ಗಾಯಾಳುಗಳೆಂದು ಗುರ್ತಿಸಲಾಗಿದೆ. 
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೃತ ಸ್ವರಲಕ್ಷ್ಮಿ ಅವರ ಸುಬ್ಬಲಕ್ಷ್ಮಿ ಅವರು, ಸೇನಾ ಪಡೆ ನಮ್ಮ ಮೇಲೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪ ಮಾಡಿತ್ತು. ಈ ಆರೋಪವನ್ನು ನಾವು ನಿರಾಕರಿಸಿದ್ದೆವು. ಹೀಗಾಗಿ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಹೇಳಿದ್ದಾರೆ. 
ಉರುವಲು ಕಡ್ಡಿಗಳನ್ನು ಹೊತ್ತುಕೊಂಡು ಆಗ ತಾನೆ ನಾನು ಮನೆಗೆ ಬರುತ್ತಿದ್ದೆ. ಸೇನಾ ಪಡೆ ರಸ್ತೆಯಲ್ಲಿದ್ದ ಬಸ್ ಗಳ ಹಿಂದೆ ಅವಿತುಕೊಂಡಿದ್ದರು. ಕೂಡಲೇ ನಮ್ಮ ಮುಂದೆ ಬಂದ ಯೋಧರು ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದೀರಾ ಎಂದು ಹೇಳಲು ಆರಂಭಿಸಿದ್ದರು. ಇದಕ್ಕೆ ನಾವು ಪ್ರತಿಭಟಿಸಿದೆವು. ಅರಣ್ಯವನ್ನು ಶುದ್ದೀಕರಿಸುತ್ತಿದ್ದೇವೆಂದು ಹೇಳಿದವು. ಕೂಡಲೇ ಸೇನಾ ಪಡೆ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com