'ಯೋಗಿ ಆದಿತ್ಯನಾಥ್' ಎಲ್ಲರನ್ನೂ ಒಳಗೊಳ್ಳುವ ಮೋದಿ ಅಭಿವೃದ್ಧಿ ಕರೆಗೆ ಅಣಕ: ಸಿಪಿಐ-ಎಂ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಿಪಿಐ-ಎಂ ವಾಗ್ದಾಳಿ ನಡೆಸಿದ್ದು, ಎಲ್ಲರನ್ನೂ ಒಳಗೊಳ್ಳುವ ಮೋದಿ ಅಭಿವೃದ್ಧಿ ಕರೆಗೆ ಆದಿತ್ಯನಾಥ್ ಅಣಕ ಎಂದು ಹೇಳಿದೆ.
ಸಿಪಿಐಎಂ
ಸಿಪಿಐಎಂ
Updated on: 
ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಿಪಿಐ-ಎಂ ವಾಗ್ದಾಳಿ ನಡೆಸಿದ್ದು, ಎಲ್ಲರನ್ನೂ ಒಳಗೊಳ್ಳುವ ಮೋದಿ ಅಭಿವೃದ್ಧಿ ಕರೆಗೆ ಆದಿತ್ಯನಾಥ್ ಅಣಕ ಎಂದು ಹೇಳಿದೆ. 
ಯೋಗಿ ಆದಿತ್ಯನಾಥ್ ಅವರು ಆರ್ ಎಸ್ಎಸ್ ನ ಆಯ್ಕೆಯಾಗಿದ್ದು, ಉತ್ತರ ಪ್ರದೇಶಕ್ಕೆ ಕೇಡುಂಟಾಗುವ ಮುನ್ಸೂಚನೆ ಎಂದು ಸಿಪಿಐ-ಎಂ ಪ್ರಕಟಣೆಯಲ್ಲಿ ತಿಳಿಸಿದೆ. ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕರೆಯ ನೈಜ ಉದ್ದೇಶವನ್ನು ಬಹಿರಂಗಗೊಳಿಸಿದ್ದು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಗೆ ಅಣವಾಗಿದೆ ಎಂದು ಸಿಪಿಐಎಂ ಹೇಳಿದೆ. 
ಯೋಗಿ ಆದಿತ್ಯನಾಥ್ ಹಿಂದುತ್ವದ ಮತಾಂಧತೆಗೆ ಪ್ರಸಿದ್ಧವಾಗಿದ್ದು, ಕೋಮುಗಲಭೆಗಳಿಗೆ ಉತ್ತೇಜನ ನೀಡುವವರಾಗಿದ್ದು ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಪಿಐ-ಎಂ ಆರೋಪಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com