ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪದಗ್ರಹಣ: ಬ್ರಹ್ಮಚಾರಿ ಮುಖ್ಯಮಂತ್ರಿಗಳ ಸಂಖ್ಯೆ ಏರಿಕೆ

ಯೋಗಿ ಆದಿತ್ಯನಾಥ್ ಸಿಎಂ ಆಗುವ ಮೂಲಕ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬ್ರಹ್ಮಚಾರಿ ಮುಖ್ಯಮಂತ್ರಿಗಳ ಸಂಖ್ಯೆಯೂ ಏರಿಕೆಯಾಗಿದೆ.
ಬ್ರಹ್ಮಚಾರಿ ಮುಖ್ಯಮಂತ್ರಿಗಳು
ಬ್ರಹ್ಮಚಾರಿ ಮುಖ್ಯಮಂತ್ರಿಗಳು
ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್  ಮುಖ್ಯಮಂತ್ರಿಯಾದ 2ನೇ ಸನ್ಯಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯೋಗಿ ಆದಿತ್ಯನಾಥ್ ಸಿಎಂ ಆಗುವ ಮೂಲಕ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬ್ರಹ್ಮಚಾರಿ ಮುಖ್ಯಮಂತ್ರಿಗಳ ಸಂಖ್ಯೆಯೂ ಏರಿಕೆಯಾಗಿದೆ. 
ಆರ್ ಎಸ್ಎಸ್ ನ ಪ್ರಚಾರಕರಾಗಿದ್ದ ಬ್ರಹ್ಮಚಾರಿಯಾಗಿರುವ ತ್ರಿವೇಂದ್ರ ಸಿಂಗ್ ರಾವತ್ 56 ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು, ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಬ್ರಹ್ಮಚಾರಿ ಸಿಎಂ ಗಳ ಕ್ಲಬ್ ಗೆ ಹೊಸ ಸೇರ್ಪಡೆಯಾಗಿದೆ. 
ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್, ಒಡಿಶಾದಲ್ಲಿ ಬಿಜೆಡಿ ಸಿಎಂ ನವೀನ್ ಪಟ್ನಾಯಕ್ ಬ್ರಹ್ಮಚಾರಿ ಸಿಎಂ ಗಳಾಗಿದ್ದು ಈ ಪಟ್ಟಿಗೆ ಯೋಗಿ ಆದಿತ್ಯನಾಥ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಅವಿವಾಹಿತೆಯಾಗಿದ್ದು ಈ ಪಟ್ಟಿಯಲ್ಲಿ ಅವರೂ ಇದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com