ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಏಕೈಕ ಮುಸ್ಲಿಂ ಸಚಿವ ಮಾಜಿ ಕ್ರಿಕೆಟಿಗ ಮೊಹ್ಸಿನ್ ರಾಜಾ

ಉತ್ತರಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು ಇಂದು ಪ್ರಬಲ ಹಿಂದುತ್ವವಾದಿ ಸಂಸದ ಯೋಗಿ ಆದಿತ್ಯನಾಥ್ ಅವರು 32ನೇ ಮುಖ್ಯಮಂತ್ರಿಯಾಗಿ...
ಮೊಹ್ಸಿನ್ ರಾಜಾ
ಮೊಹ್ಸಿನ್ ರಾಜಾ
ಲಖನೌ: ಉತ್ತರಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು ಇಂದು ಪ್ರಬಲ ಹಿಂದುತ್ವವಾದಿ ಸಂಸದ ಯೋಗಿ ಆದಿತ್ಯನಾಥ್ ಅವರು 32ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸದ ಬಿಜೆಪಿ ಮಾಜಿ ಕ್ರಿಕೆಟಿಗ ಮೊಹ್ಸಿನ್ ರಾಜಾರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಇವರು ಯೋಗಿ ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ. 
ಉತ್ತರಪ್ರದೇಶದ 403 ಸ್ಥಾನಗಳಲ್ಲಿ ಬಿಜೆಪಿ ಯಾವೊಂದು ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೇಟ್ ನೀಡಿರಲಿಲ್ಲ. ಹೀಗಿದ್ದರು ಬಿಜೆಪಿ 325 ಸ್ಥಾನಗಳಲ್ಲೂ ಭರ್ಜರಿ ಗೆಲವು ಸಾಧಿಸಿತ್ತು. ಇದೀಗ ಆ ಭಾವನೆ ತೊಲಗಿಸಲು ಮೊಹ್ಸಿನ್ ಖಾನ್ ಗೆ ಸಂಪುಟದಲ್ಲಿ ಸ್ವತಂತ್ರ ಖಾತೆಯನ್ನು ನೀಡಲಾಗಿದೆ. 
ಪ್ರಥಮ ದರ್ಜೆ ಮಾಜಿ ಕ್ರಿಕೆಟಿಗರಾಗಿದ್ದ ಮೊಹ್ಸಿನ್ ಖಾನ್ ಅವರು 2013ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com