ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬಾಬ್ರಿ ಮಸೀದಿ ಪ್ರಕರಣ ಆಸ್ತಿ ವಿವಾದ ಪ್ರಕರಣವಾಗಿದ್ದು, ಭೂಮಿ ಮುಸ್ಲಿಮರಿಗೆ ಸಂಬಂಧಿಸಿದ್ದೋ ಅಥವಾ ಹಿಂದೂಗಳಿಗೆ ಸಂಬಂಧಿಸಿದ್ದೋ ಎಂಬುದರ ವಿವಾದವಾಗಿದೆ. ಪ್ರಕರಣ ಸಂಬಂಧ ಬಿಜೆಪಿ ನಾಯಕರರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ವಿರುದ್ಧವೇನಾದರೂ ಪಿತೂರಿ ಪ್ರಕರಣಗಳೇನಾದರೂ ದಾಖಲಾಗುತ್ತವೆಯೇ ಎಂಬುದರ ಕುರಿತು ಆದೇಶ ಕೇಳಲು ಕಾಯುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.