ಹೈದರಾಬಾದ್: ರೂಮ್ ಮೇಟ್ಸ್ ಬೆತ್ತಲೆ ಫೋಟೋ, ವಿಡಿಯೋ ತೆಗೆಯುತ್ತಿದ್ದ ಮಹಿಳೆ ಬಂಧನ

ತನ್ನ ಹಾಸ್ಟೆಲ್ ರೂಮೆಟ್ಸ್ ನ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಅದನ್ನು ತನ್ನ ಬಾಸ್ ನೊಂದಿಗೆ ಹಂಚಿಕೊಳ್ಳುತ್ತಿದ್ದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ತನ್ನ ಹಾಸ್ಟೆಲ್ ರೂಮೆಟ್ಸ್ ನ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಅದನ್ನು ತನ್ನ ಬಾಸ್ ನೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಯುವತಿಯೊಬ್ಬರನ್ನು ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕಡಪಾ ಜಿಲ್ಲೆಯ ಜಮ್ಮಲಮಡುಗು ಮೂಲದ ಮಹಿಳೆ ಶ್ರಾವಣಿ(ಹೆಸರು ಬದಲಿಸಲಾಗಿದೆ) ಎಂಬುವವರ ವಿರುದ್ಧ ಆಕೆಯ ರೂಮೆಟ್ ಸಂಧ್ಯಾ(ಹೆಸರು ಬದಲಿಸಲಾಗಿದೆ) ಪೊಲೀಸರಿಗೆ ದೂರು ನೀಡಿದ್ದು, ಶ್ರಾವಣಿ ರೂಂನಲ್ಲಿದ್ದಾಗ ಸದಾ ಮೊಬೈಲ್ ಹಿಡಿದು ವಿಚಿತ್ರವಾಗಿ ವರ್ತಿಸುತ್ತಾಳೆ ಮತ್ತು ಯಾವಾಗಲೂ ನನ್ನ ಫೋಟೋ ತೆಗೆಯುತ್ತಿರುತ್ತಾಳೆ. ನಾನು ಬಟ್ಟೆ ಬದಲಿಸುವಾಗಲೂ ಫೋಟೋ ಹಾಗೂ ವಿಡಿಯೋ ತೆಗೆದಿದ್ದಾಳೆ ಎಂದು ಆರೋಪಿಸಿದ್ದಾಳೆ.
ಶ್ರಾವಣಿ ವರ್ತನೆ ಬಗ್ಗೆ ಅನುಮಾನಗೊಂಡು ನಾನು ನನ್ನ ಸ್ನೇಹಿತೆ ಸೇರಿ ಆಕೆಯ ಮೊಬೈಲ್ ಪರಿಶೀಲಿಸಿದಾಗ ನಮಗೆ ಆಘಾತವಾಯಿತು. ಆಕೆಯ ಮೊಬೈಲ್ ನಲ್ಲಿ ನನ್ನ ಬೆತ್ತಲೆ ಹಾಗೂ ಅರೆ ಬೆತ್ತಲೆ ಫೋಟೋಗಳು ಮತ್ತು ವಿಡಿಯೋಳಿದ್ದವು. ಅಲ್ಲದೆ ಈ ವಿಡಿಯೋ ಮತ್ತು ಫೋಟೋಗಳನ್ನು ಶ್ರಾವಣಿ ತಾನು ಕೆಲಸ ಮಾಡುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಹಂಚಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದ್ದು, ಆಕೆಯ ಲ್ಯಾಪ್ ಟಾಪ್ ನಲ್ಲಿ ಹಾಸ್ಟೆಲ್ ನ ಇತರೆ ವಿದ್ಯಾರ್ಥಿನಿಯರ ಬೆತ್ತಲೆ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ ಎಂದು ಸಂಧ್ಯಾ ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರಾವಣಿ ತನ್ನ ಬಾಸ್ ಕೋರಿಕೆಯಂತೆ ರೂಮೆಟ್ಸ್ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಕಳುಹಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಶ್ರಾವಣಿ ಹಾಗೂ ಆಕೆಯ ಬಾಸ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಇಂದು ಕೋರ್ಟ್ ಗೆ ಹಾಜರುಪಡಿಸುವುದಾಗಿ ಸೈಬರಾಬಾದ್ ಸೈಬರ್ ಕ್ರೈಂ ಎಸಿಪಿ ಎಸ್ ಜಯರಾಂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com