ನವದೆಹಲಿ: ಯುವಕನೊಬ್ಬ ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ 18 ವರ್ಷದ ಯುವತಿ ಮೇಲೆ ಆಸಿಡ್ ಎರಚಿದ ಘಟನೆ ಬುಧವಾರ ದಕ್ಷಿಣ ದೆಹಲಿಯ ಸಂಗಮ್ ವಿಹಾರ ಪ್ರದೇಶದಲ್ಲಿ ನಡೆದಿದೆ..ಆಸಿಡ್ ದಾಳಿಯಿಂದಾಗಿ ಯುವತಿಗೆ ಸುಟ್ಟಗಾಯಗಳಾಗಿದ್ದು, ಆಕೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಮ್ಎಸ್)ಗೆ ದಾಖಲಿಸಲಾಗಿದೆ..ಈ ಸಂಬಂಧ ಭಗ್ನ ಪ್ರೇಮಿ 23 ವರ್ಷದ ರವಿ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. .ಯುವತಿ ಇಂದು ಬೆಳಗ್ಗೆ ಸಂಗಮ್ ವಿಹಾರದಲ್ಲಿರುವ ತನ್ನ ಮನೆಯ ಹೊರಗಡೆ ನಿಂತಿದ್ದಾಗ ರವಿ ಕುಮಾರ್ ಆಸಿಡ್ ದಾಳಿ ನಡೆಸಿದ್ದು, ಇಬ್ಬರು ಒಂದೇ ಪ್ರದೇಶದ ನಿವಾಸಿಗಳಾಗಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos