ಮಗನ ಉಳಿಸಲು ಚಿರತೆ ಮೇಲೆಯೇ ಎರಗಿದ ಧೀರ ಮಹಿಳೆ

ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗನನ್ನು ಎಳೆದೊಯ್ಯುತ್ತಿದ್ದ ಚಿರತೆ ಮೇಲೆಯೇ ಎರಗಿದ ಕರುಳ ಕುಡಿಯನ್ನು ರಕ್ಷಿಸಿದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬೈ: ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗನನ್ನು ಎಳೆದೊಯ್ಯುತ್ತಿದ್ದ ಚಿರತೆ ಮೇಲೆಯೇ ಎರಗಿದ ಕರುಳ ಕುಡಿಯನ್ನು ರಕ್ಷಿಸಿದ ಘಟನೆ ಉತ್ತರ ಮುಂಬೈನ ಅರಣ್ಯದಲ್ಲಿ ನಡೆದಿದೆ.
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಗಡಿ ಭಾಗದಲ್ಲಿರುವ ಆರೆಯ್ ಕಾಲೋನಿಯ ಬುಡಕಟ್ಟ ಪ್ರದೇಶದಲ್ಲಿ ಸೋಮವಾರ ರಾತಿ 9 ಗಂಟೆಯ ಸುಮಾರಿ ಈ ಘಟನೆ ನಡೆದಿದೆ ಎಂದು ಅರಣ್ಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
23 ವರ್ಷದ ಪ್ರಮಿಳಾ ರಂಜಿಡ್ ಎಂಬ ಮಹಿಳೆ ತನ್ನ ಗುಡಿಸಲಿನಿಂದ ಹೊರಗೆ ಬಂದಾಗ, ಆಕೆಯನ್ನು ಹಿಂಬಾಲಿಸಿ ಬಂದ ಮಗುವಿನ ಮೇಲೆ ಚಿರತೆ ದಾಳಿ ಮಾಡಿದೆ. ಮಗುವಿನ ಅಳು ಕೇಳಿಸಿಕೊಂಡ ನಂತರ ಧೈರ್ಯಶಾಲಿ ಮಹಿಳೆ ಚಿರತೆಯ ಮೇಲೆಯೇ ಎರಗಿ ಮಗನನ್ನು ಕಾಪಾಡಿದ್ದಾಳೆ ಎಂದು ಅವರು ಹೇಳಿದ್ದಾರೆ.
ಚಿರತೆ ದಾಳಿಯಿಂದ ಗಾಯಗೊಂಡ ಮಗುವನ್ನು ನಗರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com