
ಚೆನ್ನೈ: ತಮಿಳುನಾಡು ಸ್ಪೀಕರ್ ಪಿ ಧನಪಾಲ್ ಅವರ ವಿರುದ್ಧ ಡಿಎಂಕೆ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ 97 ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡು ಸಿಎಂ ಪಳನಿ ಸ್ವಾಮಿ ಅವರ ವಿಶ್ವಾಸ ಮತ ಯಾಚನೆ ವೇಳೆ ವಿಧಾನಸಭೆಯಲ್ಲಿ ನಡೆದಿದ್ದ ವ್ಯಾಪಕ ಗಲಭೆಯ ನಡುವೆಯೂ ಪಳನಿ ಸ್ವಾಮಿ ವಿಶ್ವಾಸ ಮತ ಗೆದಿದ್ದರು. ಈ ವೇಳೆ ಡಿಎಂಕೆ ಪಕ್ಷ ಶಾಸಕ ವರ್ತನೆಯಿಂದ ಬೇಸತ್ತಿದ್ದ ಸ್ಪೀಕರ್ ಪಿ ಧನಪಾಲ್ ಅವರು ಶಾಸಕರನ್ನು ಮಾರ್ಷಲ್ ಗಳ ಸಹಾಯದಿಂದ ಡಿಎಂಕೆ ಶಾಸಕರನ್ನು ಹೊರಹಾಕಿದ್ದರು. ಈ ಘಟನೆ ಬಳಿಕ ಎಂಕೆ ಸ್ಚಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ಸ್ಪೀಕರ್ ಧನಪಾಲ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು.
ಈ ಸಂಬಂಧ ಇಂದು ನಡೆದ ಮತದಾನದ ವೇಳೆ ಡಿಎಂಕೆಗೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಬಿದ್ದಿದ್ದು, ವಿರುದ್ಧವಾಗಿ ಕೇವಲ 97 ಮತಗಳು ಲಭಿಸಿವೆ. ಡಿಎಂಕೆ ಒತ್ತಾಯದ ಮೇರೆಗೆ ಶಾಸಕರನ್ನು ವಿಭಜಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿತ್ತು. ಧ್ವನಿ ಮತದ ಮೂಲಕ ಮತದಾನ ಪ್ರಕ್ರಿಯೆ ನಡೆದಿತ್ತು.
Advertisement