ಸಮಾಜಘಾತುಕರನ್ನು ಎದುರಿಸಲು, ಮಹಿಳೆಯರ ಭದ್ರತೆ ಒದಗಿಸಲು ಉತ್ತರ ಪ್ರದೇಶದ ಮಾದರಿಯಲ್ಲೇ ಆಂಟಿ ರೋಮಿಯೋ ಪಡೆ ರಚನೆಯಾಗಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ. ಬಿಹಾರ ಸರ್ಕಾರ, ಮಹಿಳೆಯರ ಸುರಕ್ಷತೆ ಹಾಗೂ ಆಂಟಿ ರೋಮಿಯೋ ಸ್ಕ್ವಾಡ್ ಗಳನ್ನು ಶಾಲೆ, ಕಾಲೇಜುಗಳಲ್ಲಿ ನಿಯೋಜಿಸಬೇಕು ಎಂದು ಸುಶೀಲ್ ಕುಮಾರ್ ಮೋದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.