ವಿವಾದಿತ ಬಂಗಾಳ ಕವಿ ಪೋಸ್ಟ್'ನ್ನು ಮತ್ತೆ ಸೇರ್ಪಡೆಗೊಳಿಸಿದ ಫೇಸ್'ಬುಕ್

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಫೇಸ್'ಬುಕ್ ನಲ್ಲಿ ಪೋಸ್ಟ್'ವೊಂದನ್ನು ಹಾಕಿ ವಿವಾದಕ್ಕೆ ಸಿಲುಕಿಕೊಂಡಿದ್ದ ಬಂಗಾಳ ಕವಿ ಶ್ರೀಜಾಟೋ ಬಂಡೋಪಾಧ್ಯಾಯ ಅವರ ಪೋಸ್ಟ್'ನ್ನು ಫೇಸ್'ಬುಕ್ ಮತ್ತೆ...
ಬಂಗಾಳ ಕವಿ ಶ್ರೀಜಾಟೋ ಬಂಡೋಪಾಧ್ಯಾಯ
ಬಂಗಾಳ ಕವಿ ಶ್ರೀಜಾಟೋ ಬಂಡೋಪಾಧ್ಯಾಯ
ಕೋಲ್ಕತಾ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಫೇಸ್'ಬುಕ್ ನಲ್ಲಿ ಪೋಸ್ಟ್'ವೊಂದನ್ನು ಹಾಕಿ ವಿವಾದಕ್ಕೆ ಸಿಲುಕಿಕೊಂಡಿದ್ದ ಬಂಗಾಳ ಕವಿ ಶ್ರೀಜಾಟೋ ಬಂಡೋಪಾಧ್ಯಾಯ ಅವರ ಪೋಸ್ಟ್'ನ್ನು ಫೇಸ್'ಬುಕ್ ಮತ್ತೆ ಸೇರ್ಪಡೆಗೊಳಿಸಿದೆ. 
ಇತ್ತೀಚೆಗಷ್ಟೇ 'ಫೇಸ್ ಬುಕ್' ಬಂಡೋಪಾಧ್ಯಾಯ ಅವರ ವಿವಾದಿತ ಪೋಸ್ಟ್'ವೊಂದನ್ನು ತೆಗೆದುಹಾಕಿತ್ತು. ಇದೀಗ ತಮ್ಮ ಅಚಾತುರ್ಯದ ಬಗ್ಗೆ ಫೇಸ್ ಬುಕ್ ಕ್ಷಮೆಯಾಚಿಸಿದ್ದು, ಬಂಡೋಪಾಧ್ಯಾಯ ಅವರ ಪೋಸ್ಟ್'ನ್ನು ಮರು ಸೇರ್ಪಡೆಗೊಳಿಸಿದೆ. 
ಆಕಸ್ಮಿಕವಾಗಿ ಪೋಸ್ಟ್'ನ್ನು ತೆಗೆದು ಹಾಕಲಾಗಿತ್ತು. ತಪ್ಪಾಗಿ ಈ ಕೆಲವನ್ನು ಮಾಡಲಾಗಿತ್ತು. ಈ ಬಗ್ಗೆ ಫೇಸ್ ಬುಕ್ ಕ್ಷಮೆಯಾಚಿಸುತ್ತದೆ. ಪೋಸ್ಟ್ ನ್ನು ಮತ್ತೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ಫೇಸ್ ಬುಕ್ ವಕ್ತಾರ ಹೇಳಿದ್ದಾರೆ. 
ಮಾರ್ಚ್ 19 ರಂದು  ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಫೇಸ್ ಬುಕ್ ನಲ್ಲಿ ಬಂಡೋಪಾಧ್ಯಯ ಅವರು 12 ಸಾಲಿನ ಕವಿತೆಯೊಂದನ್ನು ಹಾಕಿದ್ದರು. ಈ ಕವಿತೆ ಸಾಕಷ್ಟು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. 
ಮುಸ್ಲಿಂ ಮಹಿಳೆಯರನ್ನು ಸಮಾಧಿಯಿಂದ ಹೊರತೆಗೆದು ಅತ್ಯಾಚಾರ ಮಾಡಿ ಎಂಬ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀಜಾಟೋ ಬಂಡೋಪಾಧ್ಯಾಯ ಅವರು, ತಮ್ಮ 12 ನೇ ಸಾಲಿನಲ್ಲಿ  ತ್ರಿಶೂಲಕ್ಕೆ ಕಾಂಡೋಮ್ ಹಾಕಿ ಎಂದು ಬರೆದಿದ್ದರು. 
ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.20 ವರ್ಷದ ಅರ್ನಾಬ್ ಸರ್ಕಾರ್ ಎಂಬುವವರು ಬಂಡೋಪಾಧ್ಯಾಯ ವಿರುದ್ಧ ದೂರು ದಾಖಲಿಸಿದ್ದರು. ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವಂಥ ಪೋಸ್ಟ್'ನ್ನು ಬಂಡೋಪಾಧ್ಯಾಯ ಅವರು ಹಾಕಿದ್ದಾರೆಂದು ದೂರಿನಲ್ಲಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com