ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಸಂಗೀತಾ ಚಟರ್ಜಿ ಬಂಧನ!

ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಎಂದೇ ಕುಖ್ಯಾತಿ ಪಡೆದಿರುವ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಬಂಧಿಸಿದ್ದಾರೆ.
ಸಂಗೀತಾ ಚಟರ್ಜಿ
ಸಂಗೀತಾ ಚಟರ್ಜಿ
Updated on: 

ಚಿತ್ತೂರು: ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಎಂದೇ ಕುಖ್ಯಾತಿ ಪಡೆದಿರುವ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ಶಾಪಿಂಗ್ ಮಾಲ್ ವೊಂದರಲ್ಲಿ ಸಂಗೀತಾ ಚಟರ್ಜಿ ಇರುವಿಕೆಯನ್ನು ಪತ್ತೆ ಮಾಡಿದ ಪೊಲೀಸರು ಕೋಲ್ಕತಾ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ನಿನ್ನೆ ಆಕೆಯನ್ನು  ಬಂಧಿಸಿದ್ದಾರೆ. ಪ್ರಸ್ತುತ ಸಂಗೀತಾ ಚಟರ್ಜಿಯನ್ನು ಪೊಲೀಸರು ಚಿತ್ತೂರಿಗೆ ಕರೆ ತಂದಿದ್ದು, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಚಿತ್ತೂರು ಜಿಲ್ಲೆಯ ಸಬ್  ಜೈಲಿನಲ್ಲಿ ಸಂಗೀತಾ ಚಟರ್ಜಿಯನ್ನು ಇಡಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

2016ರಲ್ಲಿ ರಕ್ತ ಚಂದನ ಕಳ್ಳ ಸಾಗಣೆಯ ಡಾನ್ ಲಕ್ಷ್ಮಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಲಕ್ಷಣ್ ರನ್ನು ಸಂಗೀತಾ ಚಟರ್ಜಿ ವಿವಾಹವಾಗಿದ್ದರು. ಲಕ್ಷ್ಮಣ್ ಬಂಧನದ ಬಳಿಕ ಇಡೀ ರಕ್ತ ಚಂದನ ಕಳ್ಳಸಾಗಣೆ ದಂಧೆಯ  ಮೇಲುಸ್ತುವಾರಿಯನ್ನು ರೂಪದರ್ಶಿ ಸಂಗೀತಾ ಚಟರ್ಜಿ ನೋಡಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com