ಮೊದಲ ಬಾರಿಗೆ ವಿದ್ಯುತ್ ರಫ್ತುದಾರ ದೇಶವಾದ ಭಾರತ!

ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತ ದೇಶ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಆಮದು ದೇಶದಿಂದ, ವಿದ್ಯುತ್ ರಫ್ತು ದೇಶವಾಗಿದೆ.
ಮೊದಲ ಬಾರಿಗೆ ವಿದ್ಯುತ್ ರಫ್ತುದಾರ ದೇಶವಾದ ಭಾರತ!
ಮೊದಲ ಬಾರಿಗೆ ವಿದ್ಯುತ್ ರಫ್ತುದಾರ ದೇಶವಾದ ಭಾರತ!
ನವದೆಹಲಿ: ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಭಾರತ ದೇಶ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಆಮದು ದೇಶದಿಂದ, ವಿದ್ಯುತ್ ರಫ್ತು ದೇಶವಾಗಿದೆ.
ಭಾರತ ಮೊದಲ ಬಾರಿಗೆ ವಿದ್ಯುತ್ ರಫ್ತು ಮಾಡುತ್ತಿರುವುದರ ಬಗ್ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ನೀಡಿರುವ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, 2016-17 ನೇ ಸಾಲಿನಲ್ಲಿ (ಏಪ್ರಿಲ್-ಫೆಬ್ರವರಿ ವರೆಗೆ) ಭಾರತ ನೇಪಾಳ ಬಾಂಗ್ಲಾ, ಮಾಯನ್ಮಾರ್ ಗೆ ಒಟ್ಟು 5,798 ಮಿಲಿಯನ್ ಯುನಿಟ್ ನಷ್ಟು ವಿದ್ಯುತ್ ನ್ನು ರಫ್ತು ಮಾಡಿದೆ ಎಂದು ಇಂಧನ ಸಚಿವಾಲಯದ ಹೇಳಿಕೆಯ ಮೂಲಕ ತಿಳಿದುಬಂದಿದೆ. 
ಕಳೆದ ಮೂರು ವರ್ಷಗಳಲ್ಲಿ ನೇಪಾಳ ಹಾಗೂ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತಿದ್ದ ವಿದ್ಯುತ್ ಪ್ರಮಾಣ 2.5 ರಿಂದ 2.8 ಪಟ್ಟು ಹೆಚ್ಚಾಗಿದೆ ಎಂದು ಇಂಧನ ಸಚಿವಾಲಯ ಮಾಹಿತಿ ನೀಡಿದೆ. 80 ರ ದಶಕದ ಮಧ್ಯಭಾಗದಿಂದ ಭಾರತ ಭೂತಾನ್ ನಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತಿತ್ತು ಹಾಗೂ ಅಲ್ಪ ಪ್ರಮಾಣದ ವಿದ್ಯುತ್ ನ್ನು ನೇಪಾಳಕ್ಕೆ ರಫ್ತು ಮಾಡುತ್ತಿತ್ತು.
2016 ರಲ್ಲಿ ಭಾರತ ವಿದ್ಯುತ್ ರಫ್ತು ಮಾಡುವ ಪ್ರಮಾಣ ಹೆಚ್ಚಾಗಿದ್ದು, ಮೊದಲ ಬಾರಿಗೆ ವಿದ್ಯುತ್ ರಫ್ತುದಾರ ದೇಶವಾಗಿದೆ ಎಂದು ಇಂಧನ ಸಚಿವಾಲಯ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com