ಹಿಂದಿ-ವಿರೋಧಿ ಚಳುವಳಿ ಆರಂಭಿಸುವುದಾಗಿ ಸ್ಟಾಲಿನ್ ಬೆದರಿಕೆ

ತಮಿಳುನಾಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲೀಷ್ ಜೊತೆಗೆ ಹಿಂದಿ ನಾಮಫಲಕವನ್ನು ಹಾಕುವಂತೆ ಸೂಚನೆ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ದ್ರಾವಿಡ ಮುನ್ನೇತ್ರ ಕಜ್ಹಗಮ್ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್ ಅವರು ರಾಜ್ಯದಲ್ಲಿ...
ದ್ರಾವಿಡ ಮುನ್ನೇತ್ರ ಕಜ್ಹಗಮ್ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್
ದ್ರಾವಿಡ ಮುನ್ನೇತ್ರ ಕಜ್ಹಗಮ್ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್
ಚೆನ್ನೈ: ತಮಿಳುನಾಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲೀಷ್ ಜೊತೆಗೆ ಹಿಂದಿ ನಾಮಫಲಕವನ್ನು ಹಾಕುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ದ್ರಾವಿಡ ಮುನ್ನೇತ್ರ ಕಜ್ಹಗಮ್ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್ ಅವರು ರಾಜ್ಯದಲ್ಲಿ ಹಿಂದಿ ವಿರೋಧಿ ಚಳುವಳಿ ಆರಂಭಿಸುವುದಾಗಿ ಶನಿವಾರ ಬೆದರಿಕೆ ಹಾಕಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಹಿಂದಿನಿಂದಲೇ ನಿಂತು ತಮಿಳುನಾಡಿನಲ್ಲಿ ಹಿಂದಿ ಭಾಷೆ ಹೇರುವ ಪ್ರಯತ್ನಿಗಳನ್ನು ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲೀಷ್ ಜೊತೆಗೆ ಹಿಂದಿ ಭಾಷೆಯ ನಾಮಫಲಕ ಹಾಕುತ್ತಿರುವ ಬೆಳವಣಿಗೆಗಳನ್ನು ನಾವು ಖಂಡಿಸುತ್ತೇವೆಂದು ಹೇಳಿದ್ದಾರೆ. 
ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ, ತಮಿಳುನಾಡು ಭಾಷೆಗೆ ಪ್ರಾಮುಖ್ಯತೆಯನ್ನು ನೀಡದೇ ಹೋದರೆ ಹಿಂದಿ ವಿರೋಧಿ ಚಳುವಳಿಯನ್ನು ನಾವು ಆರಂಭಿಸುತ್ತೇವೆಂದು ತಿಳಿಸಿದ್ದಾರೆ. 
ತಮಿಳುನಾಡಿನ ಕೃಷ್ಣಗಿರಿ ಹಾಗೂ ವಿಲ್ಲೂರ್ ಜಿಲ್ಲೆಗಳಲ್ಲಿರುವ ಅಂಗಡಿಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಜೊತೆಗೆ ಹಿಂದಿ ಭಾಷೆಯನ್ನು ಸೇರ್ಪಡೆಗೊಳಿಸುತ್ತಿರುವುದಾಗಿ ವರದಿಗಳು ತಿಳಿದುಬಂದಿದ್ದವು. ಈ ಹಿನ್ನಲೆಯಲ್ಲಿ ಸ್ಟಾಲಿನ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಹಿಂದಿ ವಿರೋಧಿ ಚಳುವಳಿ ಆರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ. 
1930 ಹಾಗೂ 1960ರಲ್ಲೂ ಹಿಂದಿ ಭಾಷೆ ಹೇರಿಕೆಯ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆಗಳು ಹಾಗೂ ಹಿಂಸಾಚಾರಗಳು ನಡೆದಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com