ಆದೇಶದಿಂದ 'ದಲಿತ ನ್ಯಾಯಾಧೀಶನಿಗೆ ಅವಮಾನ': ಸುಪ್ರೀಂ ಆದೇಶ ತಿರಸ್ಕರಿಸಿದ ನ್ಯಾ. ಕರ್ಣನ್

ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನೀಡಲಾಗಿರುವ ಆದೇಶ ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ ಮಾಡಿದಂತಾಗಿದೆ ಎಂದು ನ್ಯಾಯಾಧೀಶ ಕರ್ಣನ್ ಅವರು ಸುಪ್ರೀಂಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ...
ನ್ಯಾಯಾಧೀಶ ಕರ್ಣನ್
ನ್ಯಾಯಾಧೀಶ ಕರ್ಣನ್
ನವದೆಹಲಿ: ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನೀಡಲಾಗಿರುವ ಆದೇಶ ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ ಮಾಡಿದಂತಾಗಿದೆ ಎಂದು ನ್ಯಾಯಾಧೀಶ ಕರ್ಣನ್ ಅವರು ಸುಪ್ರೀಂಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ. 
ಮೇ.4 ರಂದು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಸುಪ್ರೀಂಕೋರ್ಟ್ ನ ಸಪ್ತಸದಸ್ಯ ಪೀಠದ ಆದೇಶ ಹಾಸ್ಯಾಸ್ಪದ ಹಾಗೂ ಅಪರೂಪವಾಗಿದೆ ಎಂದು ಕರ್ಣನ್ ಕಿಡಿಕಾರಿದ್ದಾರೆ. 
ನಾನೇನು ಮಾನಸಿಕ ಅಸ್ವಸ್ಥನೇ? ನನ್ನ ಮಾನಸಿಕ ಆನಾರೋಗ್ಯ ಅಳೆಯಲು ಸುಪ್ರೀಂಕೋರ್ಟ್ ಯಾರು? ನಾನು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಕಣ್ನ್ ಸುಪ್ರೀಂ ವಿರುದ್ಧ ಗುಡುಗಿದ್ದಾರೆ. 
ನಾನೊಬ್ಬ ದಲಿತ ಎಂಬ ಕಾರಣಕ್ಕೆ ನನ್ನನ್ನು ಗುರಿ ಮಾಡಲಾಗಿದೆ. ನನ್ನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಳು ನ್ಯಾಯಾಧೀಶರು ಭ್ರಷ್ಟರು. ಒಂದು ವೇಳೆ, ಪಶ್ಚಿಮ ಬಂಗಾಳ ಡಿಜಿಪಿ ನನ್ನ ಒಪ್ಪಿಗೆ ಪಡೆಯದೇ ಏನಾದರೂ ನಡೆದುಕೊಂಡಿದ್ದೇ ಆದರೆ, ಅವರ ವಿರುದ್ಧ ಆದೇಶ ಹೊರಡಿಸುತ್ತೇನೆಂದು ಹೇಳಿದ್ದಾರೆ. 
ಇದೇ ವೇಳೆ ಸುಪ್ರೀಂಕೋರ್ಟ್ ನ ಎಲ್ಲಾ 7 ನ್ಯಾಯಾಧೀಶರನ್ನೂ ದೆಹಲಿಯ ಏಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಬೇಕು ಎಂದು ನಾನು ದೆಹಲಿ ಡಿಜಿಪಿ ಅವರಿಗೆ ಆದೇಶಿಸುತ್ತೇನೆ. ಮೇ.7ರೊಳಗಾಗಿ ಈ ಬಗ್ಗೆ ನನಗೆ ಅವರು ವರದಿ ಸಲ್ಲಿಸಬೇಕು ಎಂದು ಕರ್ಣನ್ ಅವರು ಹೊರಡಸಿದ ಆದೇಶವನ್ನು ಮಾಧ್ಯಮ ಕಚೇರಿಗಳಿಗೆ ತಲುಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com