ತಂದೆ ತ್ಯಾಗಕ್ಕೆ ಪ್ರತಿಯಾಗಿ '50 ಪಾಕಿಸ್ತಾನ ಯೋಧರ ರುಂಡ'ಗಳನ್ನು ನೀಡಿ: ಹುತಾತ್ಮ ಯೋಧನ ಪುತ್ರಿ ಆಗ್ರಹ

ತಂದೆ ಬಲಿದಾನಕ್ಕೆ ಪ್ರತಿಯಾಗಿ 50 ಪಾಕಿಸ್ತಾನ ಯೋಧ ರುಂಡಗಳನ್ನು ನೀಡಿ ಎಂದು ಹುತಾತ್ಮ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮುಖ್ಯ ಪೇದೆ ಪ್ರೇಮ್ ಸಾಗರ್ ಅವರ ಪುತ್ರಿ ಮಂಗಳವಾರ ಆಗ್ರಹಿಸಿದ್ದಾರೆ...
ಹುತಾತ್ಮ ಯೋಧ ಪ್ರೇಮ್ ಸಾಗರ್ ಅವರ ಪತ್ನಿ ಹಾಗೂ ಪುತ್ರಿ
ಹುತಾತ್ಮ ಯೋಧ ಪ್ರೇಮ್ ಸಾಗರ್ ಅವರ ಪತ್ನಿ ಹಾಗೂ ಪುತ್ರಿ
ಡಿಯೋರಿಯಾ: ತಂದೆ ಬಲಿದಾನಕ್ಕೆ ಪ್ರತಿಯಾಗಿ 50 ಪಾಕಿಸ್ತಾನ ಯೋಧ ರುಂಡಗಳನ್ನು ನೀಡಿ ಎಂದು ಹುತಾತ್ಮ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮುಖ್ಯ ಪೇದೆ ಪ್ರೇಮ್ ಸಾಗರ್ ಅವರ ಪುತ್ರಿ ಮಂಗಳವಾರ ಆಗ್ರಹಿಸಿದ್ದಾರೆ. 
ನಿನ್ನೆಯಷ್ಟೇ ಅಂತರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ, ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರನ್ನು ತುಂಡರಿಸಿ ಪೈಶಾಚಿತ ಕೃತ್ಯವೆಸಗಿತ್ತು. ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಪರಮ್ಜಿತ್ ಸಿಂಗ್ ಹಾಗೂ ಬಿಎಸ್ಎಫ್ ಮುಖ್ಯಪೇದೆ ಪ್ರೇಮ್ ಸಾಗರ್ ಹುತಾತ್ಮರಾಗಿದ್ದರು. 
ತಂದೆಯ ತ್ಯಾಗವನ್ನು ಮರೆಯಬಾರದು. ಅವರ ತ್ಯಾಗಕ್ಕೆ ಪ್ರತಿಯಾಗಿ ಸರ್ಕಾರ ನಮಗೆ 50 ಪಾಕಿಸ್ತಾನ ಯೋಧರ ರುಂಡಗಳನ್ನು ತಂದು ನೀಡಟಬೇಕೆಂದು ಹುತಾತ್ಮ ಯೋಧ ಪ್ರೇಮ್ ಸಿಂಗ್ ಅವರ ಪುತ್ರಿ ಸರೋಜ್ ಅವರು ಹೇಳಿದ್ದಾರೆ. 
ಪ್ರೇಮ್ ಸಿಂಗ್ ಅವರ ಸಂಬಂಧಿಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪಾಕಿಸ್ತಾನ ಪೈಶಾಚಿಕ ಕೃತ್ಯವೆಸಗುತ್ತಿದ್ದರೂ ಕೇಂದ್ರ ಮಾತ್ರ ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸರ್ಕಾರ ಕ್ರಮಕೈಗೊಳ್ಳದೆ ಇರುವುದರಿಂದಲೇ ಪದೇ ಪದೇ ಇಂತಹ ಕೃತ್ಯಗಳು ಮರುಕಳಿಸುತ್ತಿವೆ ಎಂದು ಹೇಳಿದ್ದಾರೆ. 
ಪಾಕಿಸ್ತಾನ ವರ್ತನೆಗೆ ಸರ್ಕಾರ ಸೂಕ್ತ ರೀತಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇಂತರ ಅಮಾನವೀಯ ಕೃತ್ಯಕ್ಕೆ ದಿಟ್ಟ ಉತ್ತರವನ್ನು ನೀಡಲೇಬೇಕು. ಪಾಕಿಸ್ತಾನ ಅಟ್ಟಹಾಸ ಮರೆಯುತ್ತಿದ್ದು, ಕೇಂದ್ರ ಸರ್ಕಾರ ಸುಮ್ಮನೆ ಕೂರಬಾರದು ಎಂದು ತಿಳಿಸಿದ್ದಾರೆ. 
ನನ್ನ ಸಹೋದರ ದೇಶಕ್ಕಾಗಿ ತ್ಯಾಗ ಮಾಡಿದ್ದು, ಆತನ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ಪಾಕಿಸ್ತಾನ ಸೈನಿಕರು ಆತನ ಶಿರಚ್ಛೇದ ಮಾಡಿರುವುದು ನಿಜಕ್ಕೂ ಹೃದಯ ಕಿತ್ತುಬರುವಂತಾಗಿದೆ ಎಂದು ಪ್ರೇಮ್ ಸಾಗರ್ ಅವರ ಸಹೋದರ ದಯಾಶಂಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com