ಸರ್ಜಿಕಲ್ ಸ್ಟ್ರೈಕ್ ನಂತರ ಎಲ್ಒಸಿಯಲ್ಲಿ ಮತ್ತೆ ಚಿಗುರಿದ್ದ ಭಯೋತ್ಪಾದಕ ಕ್ಯಾಂಪ್ ಗಳು!

2016 ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರವೂ ಪಾಕ್ ಆಕ್ರಮಿತ-ಕಾಶ್ಮೀರದಲ್ಲಿ ಭಯೋತ್ಪಾದಕ ಕ್ಯಾಂಪ್ ಗಳು ಮತ್ತೆ ಚಿಗುರಿದ್ದು, 20 ಕ್ಯಾಂಪ್...
ಸರ್ಜಿಕಲ್ ಸ್ಟ್ರೈಕ್ ನಂತರ ಎಲ್ಒಸಿಯಲ್ಲಿ ಮತ್ತೆ ಚಿಗುರಿದ್ದವು ಭಯೋತ್ಪಾದಕ ಕ್ಯಾಂಪ್ ಗಳು!
ಸರ್ಜಿಕಲ್ ಸ್ಟ್ರೈಕ್ ನಂತರ ಎಲ್ಒಸಿಯಲ್ಲಿ ಮತ್ತೆ ಚಿಗುರಿದ್ದವು ಭಯೋತ್ಪಾದಕ ಕ್ಯಾಂಪ್ ಗಳು!
ನವದೆಹಲಿ: 2016 ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರವೂ ಪಾಕ್ ಆಕ್ರಮಿತ-ಕಾಶ್ಮೀರದಲ್ಲಿ ಭಯೋತ್ಪಾದಕ ಕ್ಯಾಂಪ್ ಗಳು ಮತ್ತೆ ಚಿಗುರಿದ್ದು, 20 ಕ್ಯಾಂಪ್ ಗಳು ಹೆಚ್ಚಾಗಿ ಪ್ರಾರಂಭವಾಗಿವೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ್ದಾಗ ಸುಮಾರು 35 ಭಯೋತ್ಪಾದಕ ತರಬೇತಿ ಕ್ಯಾಂಪ್ ಗಳಿದ್ದವು, ಸರ್ಜಿಕಲ್ ಸ್ಟ್ರೈಕ್ ನಂತರ ಅವುಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಳಭಾಗಕ್ಕೆ ವರ್ಗಾವಣೆಗೊಂಡಿದ್ದವು. ಆದರೆ ಈಗ ಮತ್ತೊಮ್ಮೆ ಪಾಕಿಸ್ತಾನದ ಭಯೋತ್ಪಾದಕರು, ಸೈನಿಕರು ಭಾರತೀಯ ಸೇನೆಯ ಯೋಧರ ಶಿರಚ್ಛೇಧ ಮಾಡಿದ್ದಾರೆ. ಈ ಬೆನ್ನಲ್ಲೇ ಗುಪ್ತಚರ ಇಲಾಖೆ ವರದಿ ಬಹಿರಂಗವಾಗಿದ್ದು, ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಂತರ ಭಯೋತ್ಪಾದಕ ಕ್ಯಾಂಪ್ ಗಳು ಮತ್ತಷ್ಟು ಹೆಚ್ಚಾಗಿದ್ದು 35 ರಿಂದ 55 ಕ್ಕೆ ಏರಿಕೆಯಾಗಿದೆ ಎಂದು ಗುಪ್ತಚರ ಇಲಾಖೆ ವರದಿಯನ್ನು ಉಲ್ಲೇಖಿಸಿ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಸರ್ಜಿಕಲ್ ಸ್ಟ್ರೈಕ್ ನಂತರ ಚಿಗುರಿರುವ ಭಯೋತ್ಪಾದಕ ಕ್ಯಾಂಪ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸತೊಡಗಿವೆ. 2017 ರ ಮೊದಲು 4 ತಿಂಗಳುಗಳು 60 ಬಾರಿ ಒಳನುಸುಳುವಿಕೆ ನಡೆದಿದ್ದು, ಜಮ್ಮು-ಕಾಶ್ಮೀರದೊಳಗೆ 15 ಭಯೋತ್ಪಾದಕರು ನುಸುಳಿದ್ದು ಕಾಶ್ಮೀರ ಕಣಿವೆಯಲ್ಲಿ 160 ಭಯೋತ್ಪಾದಕರು ಸಕ್ರಿರಾಗಿದ್ದು, ಜಮ್ಮು-ಕಾಶ್ಮೀರದಲ್ಲಿರುವ ಭದ್ರತಾ ಪಡೆಗಳ ಮೇಲಿನ ದಾಳಿಯನ್ನು ತೀವ್ರಗೊಳಿಸುವಂತೆ ಭಯೋತ್ಪಾದಕರನ್ನು ನಿಯಂತ್ರಿಸುತ್ತಿರುವ ಪಾಕಿಸ್ತಾನದ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿಗಳ ಮೂಲಕ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com