ಗೋವಾ: ಸಾರ್ವಜನಿಕ ಸ್ಥಳಗಳಲ್ಲಿ ಎಣ್ಣೆ ಹೊಡೆದರೆ ಜೈಲು

ಇನ್ನುಮುಂದೆ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯುಪಾನ ಮಾಡಿದರೆ ನೀವು ಜೈಲಿಗೆ ಹೋಗುವುಗು ಗ್ಯಾರಂಟಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಪಣಜಿ: ಇನ್ನುಮುಂದೆ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯುಪಾನ ಮಾಡಿದರೆ ನೀವು ಜೈಲಿಗೆ ಹೋಗುವುಗು ಗ್ಯಾರಂಟಿ.
ಹೌದು. ಪ್ರವಾಸಿ ರಾಜ್ಯದ ಪೊಲೀಸರು, ಬಹಿರಂಗವಾಗಿ ಎಣ್ಣೆ ಹೊಡೆಯುವವರನ್ನು ಕೂಡಲೇ ಬಂಧಿಸುವಂತೆ ತನ್ನ ಸಿಬ್ಬಂದಿಗೆ ಸೂಚಿಸಿದೆ.
ಬಹಿರಂಗ ಮದ್ಯಪಾನದಿಂದ ಹಲವು ಪ್ರವಾಸಿಗರು ಮುಜುಗರ ಅನುಭವಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮದ್ಯ ಸೇವಿಸಿದ್ದು ಕಂಡುಬಂದರೆ ಸೆಕ್ಷನ್ 34ರ ಅನ್ವಯ ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿರುವುದಾಗಿ ಗೋವಾ ಉತ್ತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೆ ಕಶ್ಯಪ್ ಅವರು ತಿಳಿಸಿದ್ದಾರೆ.
ಬೀಚ್`ಗೆ ಕಾಲ ಕಳೆಯಲು ಬರುವ ಪ್ರವಾಸಿಗರು ಒಡೆದ ಬಾಟಲುಗಳನ್ನ ಎಸೆದು ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಇದರ ಜೊತೆಗೆ, ಈ ಬಗ್ಗೆ ಪರಿಶೀಲನೆ ನಡೆಸಿದಾಗ ತೀರದಲ್ಲಿ ರಾಶಿ ರಾಶಿ ಬಾಟಲ್`ಗಳು ಪತ್ತೆಯಾಗಿದ್ದು, ಕಠಿಣ ಕ್ರಮಕ್ಕೆ ಆದೇಶಿಸಿರುವುದಾಗಿ ಎಸ್`ಪಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com