ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಆರೋಪದ ಹಿಂದೆ ಬಿಜೆಪಿ ಕೈ: ಸಂಜಯ್ ಸಿಂಗ್

ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕಪಿಲ್ ಮಿಶ್ರಾ ಅವರನ್ನು...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕಪಿಲ್ ಮಿಶ್ರಾ ಅವರನ್ನು ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿದೆ ಎಂದು ಆಪ್ ದೆಹಲಿ ವಕ್ತಾರ ಸಂಜಯ್ ಸಿಂಗ್ ಆರೋಪಿಸಿದ್ದಾರೆ. 
ಕೇಜ್ರಿವಾಲ್ ವಿರುದ್ಧದ ಲಂಚ ಆರೋಪ ಕುರಿತಂತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಪ್ ದೆಹಲಿ ವಕ್ತಾರ ಸಂಜಯ್ ಸಿಂಗ್, ಲಂಚ ಆರೋಪ ಸಂಬಂಧ ಅರವಿಂದ್ ಕೇಜ್ರಿವಾಲ್ ರಾಜಿನಾಮೆ ನೀಡುವ ಪ್ರಶ್ನೆಯೆ ಇಲ್ಲ. ಆಧಾರ ರಹಿತ ಆರೋಪಗಳಿಗೆಲ್ಲಾ ರಾಜಿನಾಮೆ ನೀಡಬೇಕಿಲ್ಲ. ಹಾಗೇ ಎಲ್ಲಾ ಆರೋಪಗಳಿಗೂ ಕೇಜ್ರಿವಾಲ್ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಆಪ್ ಪಕ್ಷ ಅವರ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.  
ಕಪಿಲ್ ಮಿಶ್ರಾ ಸಚಿವ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಿಥ್ಯರೋಪಗಳನ್ನು ಮಾಡುತ್ತಿದ್ದಾರೆ. ಅವರಿಗೆ ಬಿಜೆಪಿ ಸಾಥ್ ನೀಡುತ್ತಿದೆ ಎಂದರು. ಇನ್ನು ಪ್ರಕರಣ ಕುರಿತಂತೆ ಕೇಂದ್ರ ಸರ್ಕಾರ ತನಿಖೆ ಆದೇಶಿಸಿದರೇ ಅದನ್ನು ಎದುರಿಸಲು ಪಕ್ಷ ಸಿದ್ಧ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com