ತ್ರಿವಳಿ ತಲಾಖ್ ಅಸಂವಿಧಾನಿಕ, ಮಹಿಳಾ ಹಕ್ಕುಗಳ ಉಲ್ಲಂಘನೆ: ಅಲಹಾಬಾದ್ ಹೈಕೋರ್ಟ್

ತ್ರಿವಳಿ ತಲಾಖ್ ವಿರುದ್ಧ ಮತ್ತೆ ತನ್ನ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್ ಈ ಪದ್ಧತಿಯನ್ನು ಅಸಂವಿಧಾನಿಕ, ಮಹಿಳಾ ಹಕ್ಕುಗಳ ಉಲ್ಲಘಂನೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಲಹಾಬಾದ್: ತ್ರಿವಳಿ ತಲಾಖ್ ವಿರುದ್ಧ ಮತ್ತೆ ತನ್ನ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್ ಈ ಪದ್ಧತಿಯನ್ನು ಅಸಂವಿಧಾನಿಕ, ಮಹಿಳಾ ಹಕ್ಕುಗಳ ಉಲ್ಲಘಂನೆ ಎಂದು ಹೇಳಿದೆ.

ತಾನು ತಲಾಖ್ ನೀಡಿದ ಪತ್ನಿ ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು ಈ ದಾವೆಯನ್ನು ವಜಾಗೊಳಿಸುವಂತೆ ಮುಸ್ಲಿಂ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ನ್ಯಾಯಾಲಯ ತ್ರಿವಳಿ ತಲಾಖ್  ವ್ಯವಸ್ಥೆಯನ್ನು ಅಸಂವಿಧಾನಿಕ ಎಂದು ಹೇಳಿದೆ. ಅಲ್ಲದೆ ಇದೊಂದು ಮಹಿಳಾ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದೂ ಹೈಕೋರ್ಟ್ ಎಚ್ಚರಿಕೆ ನೀಡಿದೆ. ತನ್ನ ಪತಿಯು ವರದಕ್ಷಿಣೆಗಾಗಿ ತನ್ನನ್ನು ಹಿಂಸಿಸಿದ್ದ ಮತ್ತು ತಾನು  ನಿರಾಕರಿಸಿದಾಗ ತನಗೆ ವಿಚ್ಛೇದನ ನೀಡಿದ್ದಾನೆ ಎಂದು ವ್ಯಕ್ತಿಯ ಪತ್ನಿ ದೂರಿನಲ್ಲಿ ಆರೋಪಿಸಿದ್ದಳು.

"ಮುಸ್ಲಿಂ ಮದುವೆಯೊಂದು  ಒಪ್ಪಂದವಾಗಿದ್ದು, ತ್ರಿವಳಿ ತಲಾಖ್ ಹೇಳಿ ಪತಿಯೊಬ್ಬನೇ ಈ ಒಪ್ಪಂದವನ್ನು ಅಂತ್ಯಗೊಳಿಸುವಂತಿಲ್ಲ. ಹೀಗಾಗಿ ತ್ರಿವಳಿ ತಲಾಖ್‌ನ ಇಸ್ಲಾಮಿಕ್ ಪದ್ಧತಿಯು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವೂ  ಅಲ್ಲ ಮತ್ತು ಅದು ಕೆಟ್ಟ ಪದ್ಧತಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com