ತ್ರಿವಳಿ ತಲಾಖ್ ಸಂಕಷ್ಟ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿದ ಮುಸ್ಲಿಂ ಮಹಿಳೆಯರು

ತ್ರಿವಳಿ ತಲಾಖ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನಲೆಯಲ್ಲಿ, ತ್ರಿವಳಿ ತಲಾಖ್ ಸಂಕಷ್ಟ ದೂರಾಗುವಂತೆ ಕೋರಿ ವಾರಣಾಸಿಯಲ್ಲಿರುವ ಕೆಲ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸ್ ಪಠಣ...
ತ್ರಿವಳಿ ತಲಾಖ್ ಸಂಕಷ್ಟ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿದ ಮುಸ್ಲಿಂ ಮಹಿಳೆಯರು
ತ್ರಿವಳಿ ತಲಾಖ್ ಸಂಕಷ್ಟ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿದ ಮುಸ್ಲಿಂ ಮಹಿಳೆಯರು
ವಾರಣಾಸಿ: ತ್ರಿವಳಿ ತಲಾಖ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನಲೆಯಲ್ಲಿ, ತ್ರಿವಳಿ ತಲಾಖ್ ಸಂಕಷ್ಟ ದೂರಾಗುವಂತೆ ಕೋರಿ ವಾರಣಾಸಿಯಲ್ಲಿರುವ ಕೆಲ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸ್ ಪಠಣ ಮಾಡಿದ್ದಾರೆ. 
ವಾರಣಾಸಿಯ ಹನುಮಂತನ ದೇಗುಲದಲ್ಲಿ ಸೇರಿದ್ದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಸೇರಿದಂತೆ ಮಹಿಳೆಯರ ವಿರುದ್ಧ ಇರುವ ಎಲ್ಲಾ ಅನಿಷ್ಠ ಪದ್ಧತಿಗಳು ನಿರ್ಮೂಲನೆಯಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಂದಿರದಲ್ಲಿ ಸೇರಿದ್ದ ಮುಸ್ಲಿಂ ಮಹಿಳೆಯರು 100 ಬಾರಿ ಹನುಮಾನ್ ಚಾಲೀಸ ಪಠಿಸಿದರು. 
ತ್ರಿವಳಿ ತಲಾಖ್ ಪದ್ಧತಿಯಿಂದ ಮುಕ್ತಿ ಪಡೆಯುವ ಸಲುವಾಗಿ ನಾವು ಹನುಮಾನ್ ಚಾಲೀಸ್'ನ್ನು ಪಠಣ ಮಾಡುತ್ತಿದ್ದೇವೆಂದು ಮುಸ್ಲಿಂ ಮಹಿಳೆಯರು ಹೇಳಿಕೊಂಡಿದ್ದಾರೆ. 
ಶಭಾನಾ ಎಂಬ ಹೆಣ್ಣು ಮಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇವರು ಮತ್ತು ಅಲ್ಲಾಹ್ ಎಲ್ಲಾ ಒಂದೇ. ಭೂಮಿ ಮೇಲಿರುವ ಮನುಷ್ಯರು ಅದನ್ನು ವಿಂಗಡಿಸಿದ್ದಾರೆಂದು ಹೇಳಿದ್ದಾರೆ. 
ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರಿಗೆ ಸಾಕಷ್ಟು ಸಂಕಷ್ಟವನ್ನು ಸೃಷ್ಟಿ ಮಾಡುತ್ತಿದ್ದು, ಪದ್ಧತಿ ನಿರ್ಮೂಲನೆಗೊಳ್ಳಬೇಕೆಂದು ಹನುಮಂತನ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ನಮ್ಮ ಪರವಾಗಿ ತೀರ್ಪು ಬರಲಿ ಎಂದು ದೇವರಲ್ಲಿ ಮೊರೆ ಇಡುತ್ತಿದ್ದೇವೆ. ಈಶ್ವರ, ಅಲ್ಲಾಹ್ ಎಲ್ಲವೂ ಒಂದೇ, ಆದರೆ, ಭೂಮಿ ಮೇಲಿರುವ ಜನರು ಇದನ್ನು ವಿಂಗಡಿಸಿದ್ದಾರೆ ಎಂದು ತಿಳಿಸಿದ್ದಾರೆ. 
ತ್ರಿವಳಿ ತಲಾಖ್ ಸಂತ್ರಸ್ತೆ ನಗ್ಮಾ ಎಂಬುವವರು ಮಾತನಾಡಿ, ವಿಚ್ಛೇದನ ನೀಡುವ ಪತಿಯರಿಗೆ ಕಾನೂನು ಕಠಿಣ ಶಿಕ್ಷೆಯನ್ನು ನೀಡಬೇಕು. ಇದರಿಂದ ವಿಚ್ಛೇದನ ನೀಡಲು ಚಿಂತಿಸುವ ವ್ಯಕ್ತಿಗಳು ಎರಡು ಬಾರಿ ಯೋಚನೆ ಮಾಡುವಂತಾಗಬೇಕೆಂದು ತಿಳಿಸಿದ್ದಾರೆ.
ಹನುಂತನ ಮೇಲೆ ತ್ರಿವಳಿ ತಲಾಖ್ ಸಂತ್ರಸ್ತೆಗೆ ನಂಬಿಕೆಯನ್ನು ಇಟ್ಟಿದ್ದಾರೆ. ಪ್ರಸ್ತುತ ಮುಸ್ಲಿಂ ಮಹಿಳೆಯರು ಸಾಕಷ್ಟು ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತ್ರಿವಳಿ ತಲಾಖ್ ಪದ್ಧತಿಯನ್ನು ನಿರ್ಮೂಲನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಬೇಕೆಂದು ಹನುಮಂತನ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ. ಹನುಮಂತನೇ ಈ ಹೆಣ್ಣು ಮಕ್ಕಳಿಗೆ ರಕ್ಷಣೆ ಮಾಡಬೇಕೆಂದು ದೇಗುಲದ ಅರ್ಚಕ ಹೇಳಿದ್ದಾರೆ. 
ವಿಚ್ಛೇದಿತ ಮಹಿಳೆಯರ ಮರುಮದುವೆ ನಿಯಮಗಳು (ನಿಖಾ ಹಲಾಲ) ಮತ್ತು ಬಹುಪತ್ನಿತ್ವ ಪದ್ಧತಿ, ತ್ರಿವಳಿ ತಲಾಖ್ ಕುರಿತಂತೆ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ದಾಖಲಾಗಿರುವ 7 ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com