ಹರಿಯಾಣ: ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟದ ಸಂದೇಹಗಳು ಮೂಡುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಹರಿಯಾಣ ರಾಜ್ಯದ ಫರೀದಾಬಾದ್'ನ ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ...
ಹರಿಯಾಣ: ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ
ಹರಿಯಾಣ: ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ
ಫರೀದಾಬಾದ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟದ ಸಂದೇಹಗಳು ಮೂಡುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಹರಿಯಾಣ ರಾಜ್ಯದ ಫರೀದಾಬಾದ್'ನ ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವೊಂದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 
ಫರೀದಾಬಾದ್ ನ ಸರ್ಕಾರಿ ರಾಜಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ನೀಡಲಾಗುತ್ತಿದ್ದ ಮಧ್ಯಾಹ್ನದ ಊಟದಲ್ಲಿ ಉದ್ದನೆಯ ಸತ್ತ ಮರಿ ಹಾವೊಂದು ಕಂಡು ಬಂದಿದೆ. 
ಊಟದಲ್ಲಿ ಹಾವು ಕಂಡು ಬರುತ್ತಿದ್ದಂತೆಯೇ ಮಕ್ಕಳು ಊಟ ಸೇವಿಸುವುದನ್ನು ಕೂಡಲೇ ನಿಲ್ಲಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಕೆಲ ಮಕ್ಕಳು ಆಹಾರವನ್ನು ಸೇವಿಸಿ ಬಿಟ್ಟಿದ್ದರು. ಊಟ ಸೇವಿಸಿದ ಕೆಲ ನಿಮಿಷಗಳಲ್ಲೇ ಕೆಲ ಮಕ್ಕಳಿಕೆ ವಾಂತಿ ಉಂಟಾಗಿ ಅಸ್ವಸ್ಥರಾಗಿದರು. 
ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಮಕ್ಕಳಿಗೆ ಊಟ ಬಡಿಸುವುದಕ್ಕೂ ಮುನ್ನ ಅದರ ರುಚಿಯನ್ನು ಪರೀಕ್ಷಿಸಲು ಸ್ವಲ್ಪ ಪ್ರಮಾಣದ ಆಹಾರವನ್ನು ಹಾಕಿಕೊಂಡಿದ್ದರು. ಈ ವೇಳೆ ಆಹಾರದಲ್ಲಿ ಸತ್ತ ಹಾವಿನ ಮರಿ ಇರುವುದು ಕಂಡುಬಂದಿದೆ. ಕೂಡಲೇ ಅವರು ಮಕ್ಕಳು ಆಹಾರ ಸೇವಿಸದಂತೆ ಸೂಚಿಸಿದ್ದರು. 
ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಇರುವ ಸುದ್ದಿ ಕೇಳಿದೊಡನೆಯೇ ಆಘಾತವಾಯಿತು. ನಮಗೆ ಮೊದಲೇ ಆಹಾರದಿಂದ ಕೆಟ್ಟ ಹಾಗೂ ವಿಚಿತ್ರವಾದ ವಾಸನೆ ಬರುತ್ತಿತ್ತು. ಆಹಾರದಲ್ಲಿ ಏನೋ ಆಗಿದೆ ಎಂದು ತಿಳಿದಿದ್ದೆವು. ಅಷ್ಟರಲ್ಲಾಗಲೇ ಆಹಾರದಲ್ಲಿ ಸತ್ತ ಮರಿ ಹಾವು ಇದೆ, ಯಾರೂ ಊಟ ಸೇವಿಸಬಾರದು ಎಂಬ ಸೂಚನೆ ಬಂದು ಇದನ್ನು ಕೇಳಿ ಬಹಳ ಭಯವಾಯಿತು ಎಂದು ಶಾಲಾ ಮಕ್ಕಳು ಹೇಳಿಕೊಂಡಿದ್ದಾರೆ. 
ಆಹಾರದಲ್ಲಿ ಹಾವು ಕಂಡು ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರಾದ ಬೃಜ್ ಬಾಲಾ ಅವರು ಹಿರಿಯ ಆಧಿಕಾರಿಗಳಿಗೆ ಹಾಗೂ ಶಾಲೆಗೆ ಮಧ್ಯಾಹ್ನದ ಊಟ ಪೂರೈಸುವ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್'ಗೆ ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com