ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ 25 ಫ್ಲ್ಯಾಟ್'ಗಳನ್ನು ನೀಡಿದ ನಟ ವಿವೇಕ್ ಓಬೆರಾಯ್

ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರು 25 ಫ್ಲ್ಯಾಟ್ ಗಳನ್ನು...
ಬಾಲಿವುಡ್ ನಟ ವಿವೇಕ್ ಓಬೆರಾಯ್
ಬಾಲಿವುಡ್ ನಟ ವಿವೇಕ್ ಓಬೆರಾಯ್
Updated on
ಥಾಣೆ (ಮಹಾರಾಷ್ಟ್ರ): ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರು 25 ಫ್ಲ್ಯಾಟ್ ಗಳನ್ನು ನೀಡುವ ಮೂಲಕ ಉದಾರತೆಯನ್ನು ಮೆರೆದಿದ್ದಾರೆ.  
ವಿವೇಕ್ ಓಬೆರಾಯ್ ಅವರ ಕಂಪನಿಯಿಂದ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ 25 ಫ್ಲ್ಯಾಟ್ ಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 
ಈ ಕುರಿತಂತೆ ವಿವೇಕ್ ಓಬೆರಾಯ್ ಕಂಪನಿ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿ ಮಡಿದ ವೀರ ಯೋಧರ ಕುಟುಂಬಸ್ಥರಿಗೆ ಫ್ಲ್ಯಾಟ್ ಗಳನ್ನು ನೀಡುವುದಾಗಿ ಹೇಳಿಕೊಂಡಿದೆ. 
ಯೋಧರ ಕುಟುಂಬಸ್ಥರ ಕುರಿತು ಪಟ್ಟಿ ತಯಾರಿಸಿರುವ ಓಬೆರಾಯ್ ಕಂಪನಿ, ಈಗಾಗಲೇ ಯೋಧರ ಕೆಲ ಕುಟುಂಬಗಳಿಗೆ ಫ್ಲ್ಯಾಟ್ ಗಳನ್ನು ನೀಡಿದ್ದಾರೆಂದು ಎಂದು ಮೂಲಗಳು ತಿಳಿಸಿವೆ. ಇನ್ನುಳಿದವರಿಗೆ ಶೀಘ್ರದಲ್ಲಿಯೇ ಹಸ್ತಾಂತರ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 
ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ನ 74ನೇ ಬೆಟಾಲಿಯನ್ ಯೋಧರ ಮೇಲೆ ದಾಳಿ ಮಾಡಿದ್ದ ಸುಮಾರು 300 ಮಂದಿ ನಕ್ಸಲರು ಬರೊಬ್ಬರಿ 25 ಮಂದಿ ಯೋಧರನ್ನು ಹತ್ಯೆಗೈದಿದ್ದರು. ಈ ಪ್ರಕರಣ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು.
ಸುಕ್ಮಾ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಎಂದಿನಂತೆ ತಮ್ಮ ಔದಾರ್ಯತೆಯನ್ನು ಮೆರೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹುತಾತ್ಮ ವೀರ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ನೆರವು ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com