ಗುರುದಾಸ್'ಪುರ: ಪಠಾಣ್'ಕೋಟ್ ದಾಳಿಯಲ್ಲಿ ಹುತಾತ್ಮನಾದ ಯೋಧನ ಕುಟುಂಬಸ್ಥರಿಗೆ ಥಳಿತ

ಪಠಾಣ್ ಕೋಟ್ ದಾಳಿಯಲ್ಲಿ ಹುತಾತ್ಮನಾದ ಯೋಧ ಕುಲ್ವಂತ್ ಸಿಂಗ್ ಅವರ ಕುಟುಂಬಸ್ಥರಿಗೆ ನಡು ರಸ್ತೆಯಲ್ಲಿ ಥಳಿಸಿರುವ ಅಮಾನವೀಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ...
ಗುರುದಾಸ್'ಪುರ: ಪಠಾಣ್'ಕೋಟ್ ದಾಳಿಯಲ್ಲಿ ಹುತಾತ್ಮನಾದ ಯೋಧನ ಕುಟುಂಬಸ್ಥರಿಗೆ ಥಳಿತ
ಗುರುದಾಸ್'ಪುರ: ಪಠಾಣ್'ಕೋಟ್ ದಾಳಿಯಲ್ಲಿ ಹುತಾತ್ಮನಾದ ಯೋಧನ ಕುಟುಂಬಸ್ಥರಿಗೆ ಥಳಿತ
ಗುರುದಾಸ್'ಪುರ: ಪಠಾಣ್ ಕೋಟ್ ದಾಳಿಯಲ್ಲಿ ಹುತಾತ್ಮನಾದ ಯೋಧ ಕುಲ್ವಂತ್ ಸಿಂಗ್ ಅವರ ಕುಟುಂಬಸ್ಥರಿಗೆ ನಡು ರಸ್ತೆಯಲ್ಲಿ ಥಳಿಸಿರುವ ಅಮಾನವೀಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಾವೆಲ್ ಏಜೆಂಟ್ ಹಾಗೂ ಆತನ ಸಹಚರರು ಹುತಾತ್ಮ ಯೋಧ ಕುಲ್ವಂತ್ ಸಿಂಗ್ ಅವರ ಸಹೋದರ ಹಾಗೂ ಆತನ ಪತ್ನಿಗೆ ರಸ್ತೆಯೊಂದರ ಮಧ್ಯೆ ಹೊಡೆಯುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಕುಲ್ವಂತ್ ಸಿಂಗ್ ಸಹೋದರ ಹರ್ದೀಪ್ ಅವರು ವಿದೇಶಕ್ಕೆ ಕಳುಹಿಸಿಕೊಡುವಂತೆ ಟ್ರಾವೆಲ್ ಏಜೆಂಟ್ ಆಗಿರುವ ಗುರ್ನಾಮ್ ಸಿಂಗ್ ಎಂಬಾತನಿಗೆ ರೂ.9 ಲಕ್ಷ ಹಣವನ್ನು ನೀಡಿದ್ದಾರೆ. ಹಣ ಪಡೆದ ಬಳಿಕ ಗುರ್ನಾಮ್ ಸಿಂಗ್ ಮೋಸ ಮಾಡಿದ್ದಾನೆ. ಹೀಗಾಗಿ ಹರ್ದೀಪ್ ಕುಟುಂಬಸ್ಥರು ಹಣವನ್ನು ಹಿಂದಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ.
ಕುಟುಂಬಸ್ಥರ ಆಗ್ರಹದಂತೆಯೇ ಗುರ್ನಾಮ್ ರೂ.5 ಲಕ್ಷ ಹಣವನ್ನು ಹಿಂತಿರುಗಿಸಿದ್ದಾನೆ. ಉಳಿದ ಹಣವನ್ನು ಶೀಘ್ರದಲ್ಲಿಯೇ ನೀಡುತ್ತೇನೆಂದು ಪ್ರಮಾಣ ಮಾಡಿದ್ದಾನೆ. ಹಲವು ದಿನಗಳಾದರೂ ಬಾಕಿ ಹಣವನ್ನು ಗುರ್ನಾಮ್ ಸಿಂಗ್ ಹಿಂತಿರುಗಿಸಿಲ್ಲ. ಹೀಗಾಗಿ ಹರ್ದೀಪ್ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. 
ಮೇ.13 ರಂದು ಪೊಲೀಸ್ ಠಾಣೆಗೆ ದೂರು ನೀಡಲು ಹರ್ದೀಪ್ ಹಾಗೂ ಅವರ ಪತ್ನಿ ಪೊಲೀಸ್ ಠಾಣೆಗೆ ಹೋಗುತ್ತಿದ್ದ ವೇಳೆ ಮೊಬೈಲ್ ರೀಚಾರ್ಜ್ ಮಾಡಿಸಲು ಅಂಗಡಿಯೊಂದಕ್ಕೆ ಹೋಗಿದ್ದಾರೆ. ಈ ವೇಳೆ ಗುರ್ನಾಮ್ ಸಿಂಗ್ ಹಾಗೂ ಆತನ ಸಹಚರರು ಅಂಗಡಿಗೆ ನುಗ್ಗಿದ್ದು, ಹರ್ದೀಪ್ ಹಾಗೂ ಆತನ ಪತ್ನಿಯನ್ನು ರಸ್ತೆಗೆ ಎಳೆದು ಥಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ. 
ಪ್ರಕರಣ ಸಂಬಂಧ ಗುರ್ನಾಮ್ ಸೇರಿದಂತೆ 11 ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com