ಮುಂಜಾನೆಯಾಗಿದ್ದರಿಂದ ಎಸ್ಯುವಿ ವಾಹನದ ಚಾಲಕ ನಿದ್ದೆಗೆ ಜಾರಿದ್ದು ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಹಾಗೂ ಗಾಯಾಳುಗಳು ಮುಜಫರ್ ಜಿಲ್ಲೆಯ ಮುಶಾಹರಿ ಗ್ರಾಮದವರೆಂದು ತಿಳಿದುಬಂದಿದೆ. ಇವರೆಲ್ಲಾ ಜಾರ್ಖಂಡ್ ನ ದೇವಗಢ ಜಿಲ್ಲೆಯ ಬಾಬಾಧಾಮ್ ಎಂಬಲ್ಲಿ ಮುಖಂಡನ ಸಂಸ್ಕಾರವನ್ನು ಮುಗಿಸಿ ತಮ್ಮ ಊರಿಗೆ ಮರಳುತ್ತಿದ್ದರು.