ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ

ಸುನಂದಾ ಪುಷ್ಕರ್ ಸಾವಿಗೀಡಾಗಿದ್ದ ದೆಹಲಿಯ ಪ್ರತಿಷ್ಠಿತ ಹೋಟೆಲೊಂದರ ಕೊಠಡಿಯನ್ನು ಮೂರು ವರ್ಷಗಳ ನಂತರವೂ ಹೋಟೆಲ್ ಮಾಲೀಕರಿಗೆ ...
ಸುನಂದಾ ಪುಷ್ಕರ್
ಸುನಂದಾ ಪುಷ್ಕರ್
Updated on: 
ನವದೆಹಲಿ: ಸುನಂದಾ ಪುಷ್ಕರ್ ಸಾವಿಗೀಡಾಗಿದ್ದ ದೆಹಲಿಯ ಪ್ರತಿಷ್ಠಿತ ಹೋಟೆಲೊಂದರ ಕೊಠಡಿಯನ್ನು ಮೂರು ವರ್ಷಗಳ ನಂತರವೂ ಹೋಟೆಲ್ ಮಾಲೀಕರಿಗೆ ಹಸ್ತಾಂತರಿಸದಿರುವ ಬಗ್ಗೆ ದೆಹಲಿ ಪೊಲೀಸರನ್ನು ಸ್ಥಳೀಯ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
2014ರಲ್ಲಿ ಸುನಂದಾ ಪುಷ್ಕರ್ ಅವರು ಇಲ್ಲಿನ ಹೋಟೆಲೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಆಗಿನಿಂದಲೂ ಆ ಪ್ರಕರಣದ ತನಿಖೆ ನಡೆಯುತ್ತಲೇ ಇದೆ. ತನಿಖೆಯ ಅಂಗವಾಗಿ ಸುನಂದ್ ಪುಷ್ಕರ್ ಇದ್ದ ಹೋಟೆಲ್  345 ಸಂಖ್ಯೆಯ ಕೊಠಡಿಯನ್ನು ಯಾರೂ ಪ್ರವೇಶಿಸದಂತೆ ಸೀಲ್ ಮಾಡಲಾಗಿದೆ.. 
ಈ ಹಿನ್ನೆಲೆಯಲ್ಲಿ ಬುಧವಾರ ಮೆಟ್ರೋಪಾಲಿಟನ್ ನ್ಯಾಯಾಲಯದ ನ್ಯಾಯ ಮೂರ್ತಿ ಪಂಕಜ್ ಶರ್ಮಾ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ವರ್ಷಗಳೇ ಉರುಳಿದ್ದರೂ ಪ್ರಕರಣದ ತನಿಖೆಯೂ ಮುಗಿದಿಲ್ಲ. ಆ ಕೊಠಡಿಯು ಹೋಟೆಲ್ ಮಾಲೀಕರಿಗೆ ಹಸ್ತಾಂತರವಾಗಿಲ್ಲ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಕರಣದ ತನಿಖೆ ಮುಗಿಸಲು ಹಾಗೂ ಕೊಠಡಿಯನ್ನು ಹಿಂದಿರುಗಿಸಲು ಇನ್ನೆಷ್ಟು ದಿನ ಬೇಕು? ಕೊಠಡಿಗೆ ಇನ್ನೆಷ್ಟು ದಿನ ಭೇಟಿ ನೀಡಿದ ಮೇಲೆ ನಿಮ್ಮ ತನಿಖೆ ಪೂರ್ಣವಾಗುತ್ತದೆ ಎಂದು ಈಗಲೇ ಹೇಳಿಬಿಡಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಸುಮಾರು 12 ತಿಂಗಳಿನಿಂದ ಪೊಲೀಸರು ಕೊಠಡಿಯತ್ತ ಬಂದಿಲ್ಲ. ಆದರೆ, ಪುಷ್ಕರ್ ಇರುವ ಕೊಠಡಿ ಸುಮ್ಮನೇ ಹಾಗೇ ಇದೆ. ತನಿಖೆಯಾದರೂ ಮಾಡಲಿ, ತನಿಖೆ ಪೂರ್ಣಗೊಂಡಿದ್ದರೆ ನಮಗೆ (ಮಾಲೀಕರಿಗೆ) ಹಸ್ತಾಂತರಿಸಲಿ. ಈ ಬಗ್ಗೆ ನ್ಯಾಯಾಲಯ ಪೊಲೀಸರಿಗೆ ಸಲಹೆ ನೀಡಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದರು.
ಈ ಪಂಚತಾರಾ ಹೋಟೆಲ್ ನ ಕೊಠಡಿಗೆ 1 ದಿನಕ್ಕೆ 55 ರಿಂದ 61 ಸಾವಿರ ರು, ಬಾಡಿಗೆ ಪಡೆಯಲಾಗುತ್ತದೆ, ಆದರೆ ಕಳೆದ ಮೂರು ವರ್ಷಗಳಿಂದ ಈ ಸೂಟ್ ಮುಚ್ಚಿರುವುದರಿಂದ ಸುಮಾರು 50 ಲಕ್ಷ ರು. ನಷ್ಟವಾಗಿದೆ ಎಂದು ಹೋಟೆಲ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com