ಆನ್ ಲೈನ್ ಮೂಲಕ ಸೆಕ್ಸ್ ದಂಧೆ: ಮಧ್ಯಪ್ರದೇಶ ಬಿಜೆಪಿ ನಾಯಕ ಸೇರಿ 9 ಮಂದಿ ಬಂಧನ

ಆನ್ ಲೈನ್ ಮೂಲಕ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶ ಆಡಳಿತರೂಢ ಬಿಜೆಪಿ ನಾಯಕ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ಭೋಪಾಲ್: ಆನ್ ಲೈನ್ ಮೂಲಕ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶ ಆಡಳಿತರೂಢ ಬಿಜೆಪಿ ನಾಯಕ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಇ-7 ಅರೆರ ಕಾಲೋನಿಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಎರಡು ಬಾಡಿಗೆ ಫ್ಲ್ಯಾಟ್ ವೊಂದರ ಮೇಲೆ ದಾಳಿ ನಡೆಸಿದ ಸೈಬರ್ ಪೊಲೀಸರು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. 
ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ಫ್ಲ್ಯಾಟ್ ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಬಿಜೆಪಿ ನಾಯಕ ಹಾಗೂ ಮೂವರು ಗ್ರಾಹಕರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮಹಾರಾಷ್ಟ್ರ, ಮೆಘಾಲಯ ಹಾಗೂ ಮಧ್ಯಪ್ರದೇಶ ಪನ್ನ ಮೂಲದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯ ಮಾಧ್ಯಮ ಉಸ್ತುವಾರಿಯಾಗಿದ್ದ ನೀರಜ್ ಶಕ್ಯಾ(33), ಡೇವಿಡ್ ಸಿಂಗ್, ಸುರೇಶ್ ಗೇಹ್ಲೊಟ್, ರವಿ ಪ್ರಜಾಪತಿ, ಹರಿಜಿತ್ ಧನ್ವಂಜಿ, ಮನೋಜ್ ಕುಮಾರ್ ಗುಪ್ತಾ, ಕೆಕೆ ಜೈಸ್ವಾಲ್, ಸುರೇಶ್ ಬೆಲಾನಿ. ಮಿಸ್ವದ್ದೀನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಚೌಹ್ವಾಣ್ ಅವರು ತಿಳಿಸಿದ್ದಾರೆ.
ನೀರಜ್ ಬಂಧನದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಂದಕುಮಾರ್ ಸಿಂಗ್ ಅವರು ಪಕ್ಷದಿಂದ ಉಚ್ಚಾಟಿಸಿದ್ದಾರೆ ಎಂದು ಬಿಜೆಪಿ ವಕ್ತಾರ ದೀಪಕ್ ವಿಜಯ್ ವರ್ಗಿಯಾ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com