ಸತ್ತ ಬಳಿಕ ಸ್ಮಾರಕ ಬೇಡ, ಗಿಡ ನೆಟ್ಟು ಸಂರಕ್ಷಿಸಿ: ಸಾವಿನ ಬಳಿಕವೂ ಸಾರ್ಥಕತೆ ಮೆರೆದ ಸಚಿವ ಅನಿಲ್ ದವೆ

ನಾನು ಸತ್ತ ಬಳಿಕ ಸ್ಮಾರಕವನ್ನು ನಿರ್ಮಾಣ ಮಾಡಬೇಡಿ...ನನ್ನನ್ನು ಪ್ರೀತಿಸುವುದಾದರೆ, ಗೌರವಿಸುವುದಾದರೆ, ಗಿಡ ನೆಟ್ಟು ಸಂರಕ್ಷಿಸಿ...ಇದು ಸಾವಿಗೂ ಮುನ್ನ ಕೇಂದ್ರ ಸಚಿವ ಅನಿಲ್ ಮಹಾದೇವ್...
ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ ದವೆ
ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ ದವೆ
ನವದೆಹಲಿ: ನಾನು ಸತ್ತ ಬಳಿಕ ಸ್ಮಾರಕವನ್ನು ನಿರ್ಮಾಣ ಮಾಡಬೇಡಿ...ನನ್ನನ್ನು ಪ್ರೀತಿಸುವುದಾದರೆ, ಗೌರವಿಸುವುದಾದರೆ, ಗಿಡ ನೆಟ್ಟು ಸಂರಕ್ಷಿಸಿ...ಇದು ಸಾವಿಗೂ ಮುನ್ನ ಕೇಂದ್ರ ಸಚಿವ ಅನಿಲ್ ಮಹಾದೇವ್ ದವೆ ಅವರು ಹೇಳಿಕೊಂಡಿರುವ ಮನದಾಳದ ಮಾತು.
ಸಚಿವ ದವೆ ಅವರು 2012ರಲ್ಲೇ ತಮ್ಮ ಅಂತಿಮ ಇಚ್ಛಾ ಪತ್ರವನ್ನು ಬರೆದಿಟ್ಟಿದ್ದಾರೆ. ಪತ್ರದಲ್ಲಿ ಸಾಧ್ಯವಾದಲ್ಲಿ ನನ್ನ ಅಂತಿಮ ಸಂಸ್ಕಾರವನ್ನು ಬಾಂದ್ರಾ ಬನದಲ್ಲಿನ ನದಿ ಮಹೋತ್ಸವದ ಸ್ಥಾನದಲ್ಲಿ ನೆರವೇರಿಸಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ. ಪತ್ರದಲ್ಲಿನ ದವೆ ಅವರ ಮಾತುಗಳು ಅವರಲ್ಲಿರುವ ಪರಿಸರ ಪ್ರೇಮ ಆಗಾದತೆಯನ್ನು ತೋರಿಸುತ್ತದೆ. 
ನಾನು ಸತ್ತ ಬಳಿಕ ಯಾವುದೇ ಆಡಂಬರ ಮಾಡಬೇಡಿ, ನನ್ನ ನೆನಪಿಗಾಗಿ ಸ್ಮಾರಕ, ಮೂರ್ತಿ ಪ್ರತಿಷ್ಠಾಪನೆ ಮಾಡಬೇಡಿ. ನನ್ನ ನೆನಪಿನಲ್ಲಿ ಏನಾದರೂ ಮಾಡಬೇಕು ಎಂದಾದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಿ. ಇದರಿಂದ ನನಗೆ ಆನಂದವಾಗುವುದು ಎಂದು ಬರೆದುಕೊಂಡಿದ್ದಾರೆ. 
ಕೇಂದ್ರ ಪರಿಸರ ಸಚಿವ ಹಾಗೂ ಆರ್ ಎಸ್ಎಸ್'ನ ದೀರ್ಘಾವಧಿ ಕಾರ್ಯಕರ್ತರಾಗಿದ್ದ ಅನಿಲ್ ಮಾಧವ ದವೆ ಅವರು ನಿನ್ನೆಯಷ್ಟೇ ಹಠಾತ್ ನಿಧನ ಹೊಂದಿದ್ದರು. 
1956ರ ಜು.6 ರಂದು ಮಧ್ಯಪ್ರದೇಶದ ಉಜ್ಜೈಯನಿಯಲ್ಲಿ ಜನಿಸಿದ್ದ ದಾವೆ ಅವರು ಅವಿವಾಹಿತರಾದಿದ್ದರು. ಖಾಸಗಿ ಪೈಲಟ್ ಲೈಸೆನ್ಸ್ ಹೊಂದಿದ್ದವರಾಗಿದ್ದರು. ಒಮ್ಮೆ ಸೆಸ್ನಾ ವಿಮಾನವನ್ನು 18 ತಾಸುಗಳ ಕಾಲ ನರ್ಮದಾ ನಡಿ ದಂಟೆಯಲ್ಲಿ ಹಾರಿಸಿದ್ದರು. ನದಿ ಸಂರಕ್ಷಣೆ ವಿಚಾರದಲ್ಲಿ ಅವರು ಎತ್ತಿದ ಕೈ.
1993ರಿಂದ 10 ವರ್ಷಗಳ ಕಾಲ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿ ಸರ್ಕಾರ ಸ್ಥಾಪಿಸಿದ್ದರ ಹಿಂದೆ ದವೆ ಅವರ ತಂತ್ರಗಾರಿಕೆ ಇತ್ತು. 2009ರಿಂದ ರಾಜ್ಯಸಭೆ ಸದಸ್ಯ.ರಾಗಿದ್ದ ಅವರನ್ನು ಕಳೆದ ವರ್ಷವಷ್ಟೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com