ಮಿರಿಂಡಾ ಬಾಟಲ್ ನಲ್ಲಿ ಸತ್ತ ಕೀಟ ಪತ್ತೆ: ಪೆಪ್ಸಿಕೊ ಕಂಪೆನಿಗೆ ದಂಡ

ಸತ್ತ ಕೀಟ ತೇಲಾಡುತ್ತಿದ್ದ ತಂಪು ಪಾನೀಯ ಬಾಟಲಿಯನ್ನು ಗ್ರಾಹಕರಿಗೆ ಪೂರೈಸಿದ್ದಕ್ಕಾಗಿ ಹರ್ಯಾಣದ ಗುರ್ಗಾಂವ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಸತ್ತ ಕೀಟ ತೇಲಾಡುತ್ತಿದ್ದ ತಂಪು ಪಾನೀಯ ಬಾಟಲಿಯನ್ನು ಗ್ರಾಹಕರಿಗೆ ಪೂರೈಸಿದ್ದಕ್ಕಾಗಿ ಹರ್ಯಾಣದ ಗುರ್ಗಾಂವ್ ನಲ್ಲಿ  ಪೆಪ್ಸಿಕೊ ಇಂಡಿಯಾ ಕಂಪೆನಿಗೆ ಚೆನ್ನೈ ಗ್ರಾಹಕ ವ್ಯಾಜ್ಯ ಪುನರ್ನಿರ್ಮಾಣ ವೇದಿಕೆ ಕಳೆದ ಏಪ್ರಿಲ್ 13ರಂದು 15,000 ರೂಪಾಯಿ ದಂಡ ವಿಧಿಸಿದೆ. 
 ಸತ್ತ ಕೀಟ ಪಾನೀಯದಲ್ಲಿದ್ದರಿಂದ ಅದನ್ನು ಖರೀದಿಸಿದ ಗ್ರಾಹಕನಿಗೆ ಮಾನಸಿಕ ಹಿಂಸೆಯಾಗುವುದಲ್ಲದೆ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು ಎಂದು ಛೀಮಾರಿ ಹಾಕಿದ ಗ್ರಾಹಕ ಕೋರ್ಟ್, ಗ್ರಾಹಕ ಅನುಭವಿಸಿದ ಮಾನಸಿಕ ಹಿಂಸೆಗೆ 10,000 ರೂಪಾಯಿ ಮತ್ತು ಕೋರ್ಟ್ ನಲ್ಲಿ ವ್ಯಾಜ್ಯದ ಖರ್ಚಿಗಾಗಿ 5,000 ರೂಪಾಯಿಗಳನ್ನು 6 ವಾರಗಳೊಳಗೆ ನೀಡಬೇಕೆಂದು ಆದೇಶ ಹೊರಡಿಸಿದೆ. 
ಚೆನ್ನೈನ ನಿವಾಸಿ ಪಿ. ತಲಪತಿ ಅವರು 2013, ಜುಲೈ 27ರಂದು ಸ್ಟ್ರಹನ್ಸ್ ರಸ್ತೆಯಲ್ಲಿರುವ ಬಾರ್ ಗೆ ಹೋಗಿ ಅಲ್ಲೇ ಪಕ್ಕದಲ್ಲಿ ತಮ್ಸಕ್ ಅಂಗಡಿಯಲ್ಲಿ ಮಿರಿಂಡಾವನ್ನು ಖರೀದಿಸಿದರು. ಕುಡಿಯುವ ಮುನ್ನ ಬಾಟಲಿ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ಕ್ರಿಮಿ ಕೀಟಗಳು ತೇಲಾಡುತ್ತಿದ್ದುದು ಕಂಡುಬಂತು. ಗ್ರಾಹಕ ನ್ಯಾಯ ವೇದಿಕೆಯಲ್ಲಿ ದೂರು ದಾಖಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com