ಗಾಯಕ ಅಭಿಜಿತ್ ಭಟ್ಟಾಚಾರ್ಯ ಬೆಂಬಲಿಸಿ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ ಸೋನು ನಿಗಮ್

: ಅಕ್ಷೇಪಾರ್ಹ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗಾಯಕ ಸೋನು ನಿಗಮ್...
ಗಾಯಕ ಸೋನು ನಿಗಮ್
ಗಾಯಕ ಸೋನು ನಿಗಮ್
ಮುಂಬೈ: ಅಕ್ಷೇಪಾರ್ಹ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗಾಯಕ ಸೋನು ನಿಗಮ್ ಅವರು ಭಟ್ಟಾಚಾರ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. 
ನಿನ್ನೆಯಷ್ಟೇ ಅಭಿಜಿತ್ ಭಟ್ಟಾಚಾರ್ಯ ಅವರು ಕೆಲ ಮಹಿಳಾ ಟ್ವಿಟ್ಟರ್ ಬಳಕೆದಾರರು, ಪ್ರಮುಖವಾಗಿ ಜೆಎನ್'ಯು ವಿದ್ಯಾರ್ಥಿ-ಹೋರಾಗಾರ್ತಿ ಶೀಲಾ ರಶೀದ್ ಅವರ ಕುರಿತಂತೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಭಟ್ಟಾಚಾರ್ಯ ಅವರ ಟ್ವಿಟ್ಟರ್ ಖಾತೆನ್ನು ಅಮಾನತು ಮಾಡಲಾಗಿತ್ತು. 
ಇದನ್ನು ಪ್ರಶ್ನಿಸಿ ಗಾಯಕ ಸೋನಿ ನಿಗಮ್ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಜೆಎನ್'ಯು ವಿದ್ಯಾರ್ಥಿ ಮತ್ತು ಹೋರಾಟಗಾರ್ತಿ ಶೀಲಾ ರಶೀದ್ ಮತ್ತು ಬಿಜೆಪಿ ಸಂಸದ ಪರೇಶ್ ರಾವಲ್ ಸಹ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ. ಆದರೆ, ಅವರ ಖಾತೆಗಳನ್ನೇಕೆ ಅಮಾನತು ಮಾಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟ್ಟರ್ ಏಕಪಕ್ಷೀಯವಾಗಿ ವರ್ತಿಸುತ್ತಿದೆ. ಇಲ್ಲಿ ನಮ್ಮ ವಾಕ್ ಸ್ವಾತಂತ್ರ್ಯಕ್ಕೆ ಗೌರವ ಇಲ್ಲ. ಹೀಗಾಗಿ ನಾನು ಟ್ವಿಟರ್ ತೊರೆಯುತ್ತಿದ್ದು, ಟ್ವೀಟುಗಳು ಮರೆಯಾಗುವುದರಿಂದ ಮಾಧ್ಯಮಗಳು ಹಾಗೂ ಫಾಲೋವರ್ಸ್ ಗಳು ಟ್ವೀಟ್'ಗಳನ್ನು ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ತಾರ್ಕಿಕ ಹಾಗೂ ಸಂವೇದನಾಶೀಲ ದೇಶಪ್ರೇಮಿಗಳು ತಮ್ಮಂತೆಯೇ ಮಾಡುವಂತೆ ತಿಳಿಸಿದ್ದಾರೆ. 
ಮುಸ್ಲಿಂ ಧರ್ಮೀಯರ ಆಜಾನ್ ಪ್ರಾರ್ಥನೆ ಕುರಿತಂತೆ ಈ ಹಿಂದೆ ಸೋನು ನಿಗಮ್ ಅವರು ಟ್ವೀಟ್ ಮಾಡಿದ್ದರು. ಇದು ದೇಶದಾದ್ಯಂತ ತೀವ್ರ ಚರ್ಚೆ ಹಾಗೂ ವಿರೋಧಕ್ಕೆ ಎಡೆ ಮಾಡಿಕೊಟ್ಟಿತ್ತು. ಕೆಲವರು ಸೋನು ನಿಗಮ್ ಅವರನ್ನು ಮುಸ್ಲಿಂ ವಿರೋಧಿ ಎಂದು ಜರಿದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com