ಬಿಜೆಪಿ ಸೇರ್ಪಡೆ ಕುರಿತಂತೆ ರಜನಿಕಾಂತ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆಂಬ ವದಂತಿಗಳು ಕೇಳಿ ಬಂದಿತ್ತು. ಇದಕ್ಕೆ ಭಾನುವಾರವಷ್ಟೇ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ರಜನಿಕಾಂತ್ ಅವರು ಮೋದಿಯವರನ್ನು ಭೇಟಿಯಾಗುವ ಯಾವುದೇ ಸಂಭವಗಳಿಲ್ಲ ಎಂದು ಹೇಳಿದ್ದರು.