ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧ ವಿಮಾನದ ಅವಶೇಷ ಪತ್ತೆ

ಮೇ.23ರಂದು ಅಸ್ಸಾಂನ ತೇಜ್'ಪುರದ ಬಳಿ ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧ ವಿಮಾನದ ಅವಶೇಷಗಳು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹಟಿ: ಮೇ.23ರಂದು ಅಸ್ಸಾಂನ ತೇಜ್'ಪುರದ ಬಳಿ ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧ ವಿಮಾನದ ಅವಶೇಷಗಳು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. 
ಕಳೆದ ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಅಸ್ಸಾಂನ ತೇಜ್'ಪುರದಿಂದ ಹಾರಾಟ ಪ್ರಾರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ತೇಜ್'ಪುರದಿಂದ 60 ಕಿ.ಮೀ ದೂರ ತೆರಳುತ್ತಿದ್ದಂತೆ ರೆಡಾರ್ ಸಂಪರ್ಕ ಕಡಿತುಗೊಂಡಿತ್ತು. ವಿಮಾನ ನಾಪತ್ತೆಯಾದ ಪ್ರದೇಶ ಚೀನಾದ ಗಡಿ ಸಮೀಪವಿತ್ತು. 
ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದರು ಎಂದು ಹೇಳಲಾಗುತ್ತಿತ್ತು. ಯುದ್ಧ ವಿಮಾನ ನಾಪತ್ತೆಯಾಗುತ್ತಿದ್ದಂತೆ ವಿಮಾನ ಪತ್ತೆಗಾಗಿ ಅಧಿಕಾರಿಗಳು ತೀವ್ರ ಶೋಧ ಕಾರ್ಯ ಆರಂಭಿಸಿದ್ದರು. 
ಇದೀಗ ವಿಮಾನದ ಅವಶೇಷ ತೇಜ್ ಪುರದಿಂದ 60 ಕಿ.ಮೀ ದೂರದ ದಟ್ಟ ಅರಣ್ಯದ ಮಧ್ಯೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 
ಯುದ್ಧ ವಿಮಾನ ಕೊನೆಯದಾಗಿ ಸಂಪರ್ಕಕ್ಕೆ ಸಿಕ್ಕಿದ ಸ್ಥಳಕ್ಕೆ ಸಮೀಪದಲ್ಲಿಯೇ ಅವಶೇಷ ಪತ್ತೆಯಾಗಿದೆ. ಇನ್ನು ವಿಮಾನದಲ್ಲಿದ್ದ 2 ಪೈಲೆಟ್ ಗಳು ಬದುಕಿರುವ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಪೈಲಟ್ ಗಳಿಗಾಗಿ ಅಧಿಕಾರಿಗಳು ತೀವ್ರ ಹುಡುಕಾಟ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com