ನವದೆಹಲಿ: ಭಾರತೀಯ ಯುದ್ಧನೌಕೆ ಐಎನ್ಎಸ್ ಗಂಗಾ 32 ವರ್ಷಗಳ ಸುದೀರ್ಘ ಸೇವೆಯ ಬಳಿಕ ಭಾನುವಾರ ಅಧಿಕೃತವಾಗಿ ನಿವ-ತ್ತಿಯಾಗುತ್ತಿದೆ.
ಐಎನ್ಎಸ್ ಗಂಗಾ ಯುದ್ಧನೌಕೆಯನ್ನು ಕಾರ್ಯಾಚರಿಸದ ನೌಕೆಗಳ ವರ್ಗಕ್ಕೆ ಸೇರಿಸಲಾಗುವುದು ಎಂದು ನೌಕಾಪಡೆ ತಿಳಿಸಿದೆ. ಐಎನ್ಎಸ್ ಭಾರತೀಯ ನೌಕಾಪಡೆಯ ಗಂಗಾ ನೌಕೆಯು ಗೋದಾವರಿ ವರ್ಗದ ಮಾರ್ಗದರ್ಶಿ-ಕ್ಷಿಪಣಿ ಸಹಿತ ಯುದ್ಧ ನೌಕೆಯಾಗಿದ್ದು, ಅದನ್ನು ಮುಂಬೈಯಲ್ಲಿ ಮಡಗಾವ್ ಡಾಕ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿತ್ತು. 1985, ಡಿಸೆಂಬರ್ 30ರಂದು ಅಧಿಕೃತವಾಗಿ ಐಎನ್ಎಸ್ ಗಂಗಾ ಸೇವೆಗೆ ಸೇರ್ಪಡೆಯಾಗಿತ್ತು.