ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಭಾವದಿಂದ ಪಾಕ್ ಗೆ ಹೆದರಿಕೆ: ಅಮೆರಿಕ ಗುಪ್ತಚರ ಸಂಸ್ಥೆ

ಭಾರತ ಅಫ್ಘಾನಿಸ್ತಾನದಲ್ಲಿ ಹೊಂದಿರುವ ಪ್ರಭಾವದಿಂದ ಪಾಕಿಸ್ತಾನಕ್ಕೆ ಹೆದರಿಕೆ ಉಂಟಾಗಿದೆ ಎಂದು ಅಮೆರಿಕಾದ ಗುಪ್ತಚರ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ- ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
ಪ್ರಧಾನಿ ನರೇಂದ್ರ ಮೋದಿ- ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
ವಾಷಿಂಗ್ ಟನ್: ಭಾರತ ಅಫ್ಘಾನಿಸ್ತಾನದಲ್ಲಿ ಹೊಂದಿರುವ ಪ್ರಭಾವದಿಂದ ಪಾಕಿಸ್ತಾನಕ್ಕೆ ಹೆದರಿಕೆ ಉಂಟಾಗಿದೆ ಎಂದು ಅಮೆರಿಕಾದ ಗುಪ್ತಚರ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಗೆ ತಿಳಿಸಿದ್ದಾರೆ. 
ಪಾಕಿಸ್ತಾನಕ್ಕೆ ಹೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಭಾವ ಕಡಿಮೆ ಮಾಡಿಸುವುದಕ್ಕೆ ಚೀನಾದೊಂದಿಗೆ ಕೈ ಜೋಡಿಸಲಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ಹೇಳಿದೆ. ಅಮೆರಿಕಾದ ಕಾಂಗ್ರೆಸ್ ನಲ್ಲಿ ಅಫ್ಘಾನಿಸ್ತಾನದ ಬಗ್ಗೆ ಚರ್ಚೆ ನಡೆದಾಗ ಈ ವಿಷಯ ಬಹಿರಂಗಗೊಂಡಿದ್ದು, ಕಾಬೂಲ್ ನಲ್ಲಿ ಪಾಕಿಸ್ತಾನ ಹೊಂದಿರುವ ಹಿತಾಸಕ್ತಿಗಳ ಬಗ್ಗೆಯೂ ಅಮೆರಿಕಾದ ಗುಪ್ತಚರ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. 
ಯುದ್ಧಪೀಡಿತ ರಾಷ್ಟ್ರ ಅಫ್ಘಾನಿಸ್ತಾನಕ್ಕಾಗಿ ಡೊನಾಲ್ಡ್ ಟ್ರಂಪ್ ಆಡಳಿತ ಹೊಸ ನೀತಿಯನ್ನು ರೂಪಿಸುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಚರ್ಚೆಯ ಭಾಗವಾಗಿ ಭಾರತ ಅಫ್ಘಾನಿಸ್ತಾನದಲ್ಲಿ ಹೊಂದಿರುವ ಪ್ರಭಾವದಿಂದ ಪಾಕಿಸ್ತಾನಕ್ಕೆ ಹೆದರಿಕೆ ಉಂಟಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com