ಜಾಧವ್ ಗೆ ರಾಯಭಾರಿ ಕಚೇರಿ ಸಂಪರ್ಕ ಕಲ್ಪಿಸುವ ಹಕ್ಕಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ಪಾಕಿಸ್ತಾನದ ಕಾನೂನು ಪ್ರಕ್ರಿಯೆಗಳನ್ನು ಪ್ರಶ್ನಿಸಿ ಮೇಲ್ಮವಿ ಅರ್ಜಿಯನ್ನು ವಿಚಾರಣೆ ನಡೆಸುವ ಕ್ರಿಯೆಯನ್ನು ಐಸಿಜೆ ಮಾಡುವಂತಿಲ್ಲ, ಆದ್ದರಿಂದಲೇ ಭಾರತ ಏನನ್ನು ಕೇಳುತ್ತಿದೆಯೋ ಅದನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಖುರೇಷಿ ಹೇಳಿದ್ದರು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಜ್ ಜಕಾರಿಯಾ ಹೇಳಿದ್ದಾರೆ.