ರಬ್ಬರ್ ಆಟಿಕೆಯನ್ನು ತಿಂಡಿ ಎಂದು ಭಾವಿಸಿ ತಿಂದ 4 ವರ್ಷದ ಮಗು ಸಾವು!

ರಬ್ಬರ್ ಆಟಿಕೆಯನ್ನು ತಿಂಡಿ ಎಂದು ಭಾವಿಸಿದ 4 ವರ್ಷದ ಮಗುವೊಂದು ಅದನ್ನು ತಿಂದು ಸಾವನ್ನಪ್ಪಿದ ದುರಂತ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಮರಾವತಿ: ರಬ್ಬರ್ ಆಟಿಕೆಯನ್ನು ತಿಂಡಿ ಎಂದು ಭಾವಿಸಿದ 4 ವರ್ಷದ ಮಗುವೊಂದು ಅದನ್ನು ತಿಂದು ಸಾವನ್ನಪ್ಪಿದ ದುರಂತ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಈಲೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ಬಾಲಕನನ್ನು 4 ವರ್ಷದ ನಿರೀಕ್ಷಣ್ ಕುಮಾರ್ ಎಂದು ಗುರುತಿಸಲಾಗಿದೆ. 
ಕುಟುಂಬದ ಮೂಲಗಳ ಪ್ರಕಾರ ಬಾಲಕ ನಿರೀಕ್ಷಣ್ ಗೆ ಕುಟುಂಬಸ್ಥರು ಒಂದು ತಿನಿಸಿನ ಪ್ಯಾಕೆಟ್ ಅನ್ನು ನೀಡಿದ್ದರು. ಪ್ಯಾಕೆಟ್ ನಲ್ಲಿದ್ದ ತಿನಿಸನ್ನು ತಿಂದ ನಿರೀಕ್ಷಣ್ ಅದರೊಳಗಿದ್ದ ಉಚಿತ ರಬ್ಬರ್ ಆಟಿಕೆಯನ್ನೂ ಕೂಡ ತಿಂಡಿ ಎಂದು  ಭಾವಿಸಿ ಬಾಯಿಗೆ ಹಾಕಿಕೊಂಡಿದ್ದಾನೆ. ಬಳಿಕ ಅದು ಆತನ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಉಸಿರಾಟವಿಲ್ಲದೇ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ  ದಾಖಲಿಸಿದರು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತನ ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಪೋಷಕರ ಒಂದು ಸಣ್ಣ ನಿರ್ಲಕ್ಷ್ಯ ಪುಟ್ಟ ಬಾಲಕನ ಜೀವಕ್ಕೆ ಎರವಾಗಿದ್ದು ಮಾತ್ರ ದುರಂತವೇ ಸರಿ..ಇತ್ತೀಚೆಗಷ್ಟೇ ಬಾಲಕನೋರ್ವ ಚಕ್ಕುಲಿ ತಿಂದು ಇದೇ ರೀತಿಯಲ್ಲಿ ಸಾವಿಗೀಡಾಗಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com