ಬಲಪಂಥೀಯರ ಕೋಮುವಾದವೇ ಕೇರಳದ ಇಂದಿನ ಸ್ಥಿತಿಗೆ ಕಾರಣ: ಮತ್ತೆ ನಟ ಕಮಲ್ ಹಾಸನ್ ವಿವಾದ!

ಸದಾ ಒಂದಲ್ಲಾ ಒಂದು ಸುದ್ದಿಗಳಿಂದ ವಿವಾದಕ್ಕೀಡಾಗುತ್ತಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೊಂದು ವಿಚಾರದ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಸದಾ ಒಂದಲ್ಲಾ ಒಂದು ಸುದ್ದಿಗಳಿಂದ ವಿವಾದಕ್ಕೀಡಾಗುತ್ತಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೊಂದು ವಿಚಾರದ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮಿಳಿನ ಖ್ಯಾತ ದೈನಿಕವೊಂದರಲ್ಲಿ ನಟ ಕಮಲ್ ಹಾಸನ್ ಬರೆದಿರುವ ಅಂಕಣ ಇದೀಗ ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗುತ್ತಿದ್ದು, ಕೇರಳದಲ್ಲಿನ ಹಿಂಸಾಚಾರಕ್ಕೆ ಹಿಂದೂ ಭಯೋತ್ಪಾದನೆಯೇ ಕಾರಣ.  ಬಲಪಂಥೀಯ ವರ್ಗ ಕೋಮುವಾದವನ್ನು ಹರಡುತ್ತಿದೆ. ಕೇರಳದ ಇಂದಿನ ಸ್ಥಿತಿಗೆ ಇದೇ ಕಾರಣ ಎಂದು ಕಮಲ್ ತಮಿಳು ಪತ್ರಿಕೆಯಲ್ಲಿ ಅಂಕಣ ಬರೆದಿದ್ದಾರೆ.
ತಮಿಳಿನ ಖ್ಯಾತ ನಿಯತಕಾಲಿಗೆ ಆನಂದ ವಿಕಟನ್ ಗೆ ಅಂಕಣ ಬರೆದಿರುವ ನಟ ಕಮಲ್, ಹಿಂದೂ ಭಯೋತ್ಪಾದಕರಿಲ್ಲ ಎಂದು ಹೇಳಲು ಸಾಧ್ಯವಿಲ್ಲ..ಬಲಪಂಥೀಯ ವರ್ಗ ಕೋಮುವಾದವನ್ನು ಹರಡುತ್ತಿವ. ಸತ್ಯಮೇವ  ಜಯತೆಯಲ್ಲಿ ನಂಬಿಕೆ ಕಳೆದುಕೊಂಡಿರುವ ಅವರು, ಇದು ಅವರ ಅಮಾನವೀಯತೆಗೆ ಕಾರಣವಾಗಿದೆ. ಅವರ ಈ ನಡೆಗಳೇ ಕೇರಳದ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಬರೆದಿದ್ದಾರೆ.
ಈ ಹಿಂದೆ ಮೋದಿ ಸರ್ಕಾರದ ನೋಟು ನಿಷೇಧವನ್ನು ಬೆಂಬಲಿಸಿ ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದ, ನಟ ಕಮಲ್ ಹಾಸನ್ ಮೆರ್ಸಲ್ ಚಿತ್ರ ವಿವಾದ ಸಂಬಂಧ ಟ್ವೀಟ್ ಮಾಡಿ ಬಾರಿ ಸುದ್ದಿಗೆ ಗ್ರಾಸವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com