ಇದೇ ವೇಳೆ ಆಧಾರ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ನಂಬರ್ ಗಳು ನಿಷ್ಕ್ರಿಯವಾಗಲಿವೆ ಎಂದು ಮೆಸೇಜ್ ಕಳಿಸುವ ಮೂಲಕ ಗ್ರಾಹಕರಲ್ಲಿ ಭಯ ಹುಟ್ಟಿಸಿರುವುದಕ್ಕೆ ಕೋರ್ಟ್ ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್ ಗಳಿಗೆ ಕೋರ್ಟ್ ವಾಗ್ದಂಡನೆ ವಿಧಿಸಿದೆ. ಈ ರೀತಿಯ ಮೆಸೇಜ್ ಗಳನ್ನು ಕಳಿಸಲಾಗುತ್ತಿಲ್ಲ ಎಂದು ಕೇಂದ್ರ ಸಮರ್ಥನೆ ನೀಡಿದೆ. ಇದನ್ನು ನಿರಾಕರಿಸಿರುವ ನ್ಯಾ. ಎಕೆ ಸಿಕ್ರಿ, ಮಾಧ್ಯಮದ ಎದುರು ಹೇಳಲು ಬಯಸುವುದಿಲ್ಲ. ಆದರೆ ಇಂಥಹ ಮೆಸೇಜ್ ಗಳು ನನಗೂ ಬರುತ್ತಿವೆ ಎಂದು ಹೇಳಿದ್ದು, ಜನತೆಯಲ್ಲಿ ಭಯ ಮೂಡಿಸದಂತೆ ಎಚ್ಚರಿಕೆ ನೀಡಿದ್ದಾರೆ.