ಪಾಕಿಸ್ತಾನಕ್ಕೆ ಬದಲಾಗಿ ಭಾರತದೊಳಗೆ ಯುದ್ಧ ಎದುರಿಸಬೇಕಾದ ಪರಿಸ್ಥಿತಿ ಬರಬಹುದು: ರಾಜ್ ಠಾಕ್ರೆ

ನಗರದ ಬೆಹ್ರಂಪಡದಂತಹ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಬಂಗ್ಲಾದೇಶದಿಂದ ...
ರಾಜ್ ಠಾಕ್ರೆ
ರಾಜ್ ಠಾಕ್ರೆ
ಮುಂಬೈ: ನಗರದ ಬೆಹ್ರಂಪಡದಂತಹ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಬಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಇಂತಹವರು ಸುಲಭವಾಗಿ ಆಧಾರ್ ಕಾರ್ಡು ಪಡೆದುಕೊಳ್ಳುತ್ತಿದ್ದು ಇದು ಮುಂದುವರಿದರೆ ಪಾಕಿಸ್ತಾನದ ಬದಲಿಗೆ ಇಂತಹ ಅಕ್ರಮ ವಲಸಿಗರ ವಿರುದ್ಧ ಭಾರತಕ್ಕೆ ಯುದ್ಧ ಮಾಡಬೇಕಾದ ಪರಿಸ್ಥಿತಿಯುಂಟಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇಂತಹ ಅಕ್ರಮ ವಲಸಿಗರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿಲ್ಲ. ಇವರು ಎಲ್ಲಿಂದ ಬರುತ್ತಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ತಿಂಗಳು ಬಾಂದ್ರಾ ರೈಲ್ವೆ ನಿಲ್ದಾಣದ ಹತ್ತಿರ ಕೊಳಚೆ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ಆಕಸ್ಮಿಕವಲ್ಲ ಬದಲಾಗಿ ಯೋಜನೆಪೂರ್ವ ಘಟನೆ ಎಂದು ರಾಜ್ ಠಾಕ್ರೆ ಹೇಳಿದರು.
ಅವರು ನಿನ್ನೆ ಮುಂಬೈಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಳಗೇರಿ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ಪೂರ್ವ ಯೋಜಿತ. ಅದು ಆಕಸ್ಮಿಕವಲ್ಲ. ಅಲ್ಲಿ ಎಲ್ಲರೂ ಬಾಂಗ್ಲಾದೇಶಿಯರೆ ಇರುವುದು, ಅವರು ಎಲ್ಲಿಂದ ಬಂದವರು ಎಂಬುದು ನನಗೆ ಗೊತ್ತಿಲ್ಲ, ಆದರೆ ನ ಗರದಲ್ಲಿ ನೆಲೆಸಿದ್ದಾರೆ. ಅವರ ಬಗ್ಗೆ ಯಾವುದೇ ದಾಖಲೆಗಳು ಕೂಡ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com