ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ ಭಾರತದ ತಿಂಡಿ ಕಿಚಿಡಿ!

ಭಾರತ ದೇಶದ ಪ್ರಮುಖ ತಿನಿಸಾದ ಕಿಚಿಡಿ ಗಿನ್ನೆಸ್ ವಿಶ್ವ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. ಖ್ಯಾತ ...
ಕಾರ್ಯಕ್ರಮದಲ್ಲಿ ಕಿಚಡಿ ತಯಾರಿಸಿದ ಬಾಬಾ ರಾಮ್ ದೇವ್ ಮತ್ತು ಬಾಣಸಿಗ ಸಂಜೀವ್ ಕಪೂರ್. ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಮತ್ತು ಸಾದ್ವಿ ನಿರಂಜನ್ ಜ್ಯೋತಿ ಇದ
ಕಾರ್ಯಕ್ರಮದಲ್ಲಿ ಕಿಚಡಿ ತಯಾರಿಸಿದ ಬಾಬಾ ರಾಮ್ ದೇವ್ ಮತ್ತು ಬಾಣಸಿಗ ಸಂಜೀವ್ ಕಪೂರ್. ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಮತ್ತು ಸಾದ್ವಿ ನಿರಂಜನ್ ಜ್ಯೋತಿ ಇದ
ನವದೆಹಲಿ: ಭಾರತ ದೇಶದ ಪ್ರಮುಖ ತಿನಿಸಾದ ಕಿಚಿಡಿ ಗಿನ್ನೆಸ್ ವಿಶ್ವ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅವರು ಸುಮಾರು 918 ಕೆಜಿ ಕಿಚಿಡಿಯನ್ನು ಭಾರತ ವಿಶ್ವ ಆಹಾರ ಮೇಳ ಕಾರ್ಯಕ್ರಮದಲ್ಲಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದರು.
ಅಕ್ಕಿ, ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿ 1,200 ಕೆಜಿಯ ಬಾಣಲೆಯಲ್ಲಿ ಹಾಕಿ ತಯಾರಿಸಲಾಯಿತು. ಯೋಗ ಗುರು ರಾಮದೇವ್ ಕಿಚಿಡಿಗೆ ತಡ್ಕಾ ತಯಾರಿಸಿದರು. ಖಿಚಿಡಿಯನ್ನು ಅಕ್ಷಯ ಪತ್ರ ಫೌಂಡೇಶನ್ ಮತ್ತು ಗುರುದ್ವಾರದ ಆಶ್ರಮಗಳಿಗೆ ವಿತರಿಸಲಾಯಿತು.
ಇದು ವಿಶ್ವ ದಾಖಲೆಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿಗಳು ಇನ್ನೂ ಖಚಿತಪಡಿಸಬೇಕಾಗಿದೆ.
ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಸೇರಿದಂತೆ ಹಲವರು ಕಿಚಿಡಿ ತಯಾರಿ ಸಂದರ್ಭದಲ್ಲಿ ಹಾಜರಿದ್ದರು. ಭಾರತದ ಸಾಂಪ್ರದಾಯಿಕ ತಿನಿಸಾದ ಕಿಚಿಡಿಯ ಪ್ರಯೋಜನವನ್ನು ವಿವರಿಸಿದ ಸಚಿವೆ ಹರ್ಸಿಮ್ರತ್ ಕೌರ್, ಕಿಚಿಡಿಯಲ್ಲಿ ಬಹುತೇಕ ಪೌಷ್ಟಿಕಾಂಶಗಳಿರುವುದರಿಂದ ಇದೊಂದು ಸಂಪೂರ್ಣ ಆಹಾರವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ತತ್ವವನ್ನು ಕೂಡ ಕಿಚಿಡಿ ಸಾರುತ್ತದೆ ಎಂದರು.

ರಾತ್ರಿಯಿಡೀ ತಯಾರಾದ ಕಿಚಿಡಿಯ ಉಸ್ತುವಾರಿ ಖ್ಯಾತ ಬಾಣಸಿಗ ಸಂಜೀವ್ ಕಪೂರ್ ವಹಿಸಿದ್ದರು.

ದೆಹಲಿಯಲ್ಲಿ ನಡೆದ ಆಹಾರ ಮೇಳದಲ್ಲಿ ಈ ಕಿಚಿಡಿಯನ್ನು ತಯಾರಿಸಲಾಯಿತು. ಈ ಮೇಳದಲ್ಲಿ ಭಾರತದ 20ಕ್ಕೂ ಹೆಚ್ಚು ರಾಜ್ಯಗಳ ಸಾಂಪ್ರದಾಯಿಕ ಆಹಾರಗಳನ್ನು ಪರಿಚಯಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com