ಕೇವಲ 48 ಗಂಟೆಗಳ ಅವಧಿಯಲ್ಲಿ 3 ಘೇಂಡಾಮೃಗಗಳ ಭೇಟೆ!

ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳ ಭೇಟೆಗಾರರ ಗುಂಡಿಗೆ ಬಲಿಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳ ಭೇಟೆಗಾರರ ಗುಂಡಿಗೆ ಬಲಿಯಾಗಿವೆ.
ಮೂಲಗಳ ಪ್ರಕಾರ ವಿಶ್ವ ಪಾರಂಪರಿಕ ಪ್ರದೇಶ ಕೂಡ ಆಗಿರುವ ಕಾಜಿರಂಗ ಅರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳನ್ನು ಬೇಟೆಗಾರರು ಹೊಡೆದು ಕೊಂದು ಹಾಕಿದ್ದಾರೆ. ಮೇಲ್ನೋಟಕ್ಕೆ  ಘೇಂಡಾಮೃಗಗಳ ಕೊಂಬಿಗಾಗಿ ಭೇಟಿಗಾರರು ಈ ರೈನೋಗಳನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 
ಶನಿವಾರ ತಡರಾತ್ರಿಯಲ್ಲಿ ಕಾಜಿರಂಗ ಅಭಯಾರಣ್ಯ ಪ್ರದೇಶದಲ್ಲಿದ್ದ ಒಂದು ಹೆಣ್ಣು ಘೇಂಡಾ ಮೃಗ ಮತ್ತು ಅದರ ಮರಿಯನ್ನು ಕೊಂದು ಹಾಕಲಾಗಿದೆ. ಭೇಟೆಗಾರರು ರೈನೋಗಳನ್ನು ಕೊಲ್ಲಲು ಅತ್ಯಾಧುನಿಕ ಎಕೆ ಸರಣಿಯ  ಬಂದೂಕನ್ನು ಬಳಕೆ ಮಾಡಿದ್ದಾರೆ. ಕಾಜಿರಂಗ ಅರಣ್ಯಪ್ರದೇಶದ ಬುರ್ರಾಪಹಾರ್ ಪ್ರಾಂತ್ಯದ ಟುನಿಕಟಿ ಭೇಟೆ ನಿಷೇಧ ಪ್ರದೇಶದ ವ್ಯಾಪ್ತಿಯಲ್ಲಿ ರೈನೋಗಳ ಕಳೇಬರ ದೊರೆತಿದೆ. ಆದರೆ ಅವುಗಳ ಕೊಂಬುಗಳು ಮಾತ್ರ  ಕಾಣೆಯಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com